Browsing: ಜಿಲ್ಲಾ ಸುದ್ದಿ

ದಾಂಡೇಲಿ : ನಗರದ ವಾಜ್ ಮೋಟಾರ್ಸ್ ಮತ್ತು ವೆಸ್ಟರ್ನ್ ವಿಂಗ್ ಅಡ್ವೆಂಚರ್ಸ್ ಆಶ್ರಯದಲ್ಲಿ ನವಂಬರ್:18 ರಂದು ಮದ್ಯಾಹ್ನ 2 ಗಂಟೆಗೆ ಸರಿಯಾಗಿ ನಗರದ ಸುಭಾಸನಗದಲ್ಲಿರುವ ಒಳ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ…
Read More

ಭಟ್ಕಳ : ಭಾರತೀಯ ಜನತಾ ಪಾರ್ಟಿಯ ಮಹತ್ವದ ನವಭಾರತ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯೂ ಆಗಮಿಸಿದ್ದು, ಕಾರ್ಯಕ್ರಮದ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆಯನ್ನು ತಾಲೂಕಿನ ಶ್ರೀ ಗುರುಸುಧೀಂದ್ರ ಕಾಲೇಜು ಮೈದಾನÀದಲ್ಲಿ ನಿರ್ಮಿಸಿದ…
Read More

ಶಿರಸಿ : ರಾಜ್ಯದಾದ್ಯಂತ ನಡೆಯುತ್ತಿರುವ ಬಿಜೆಪಿ ಪರಿವರ್ತಮಾ ರ್ಯಾಲಿ ನ.14 ರಂದು ನಗರಕ್ಕೆ ಆಗಮಿಸಲಿದ್ದು, ಇಲ್ಲಿಯ ವಿಕಾಸ ಆಶ್ರಯ ಮೈದಾನದಲ್ಲಿ ರಾಜ್ಯ ಪ್ರಮುಖ ನಾಯಕರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ…
Read More

ಕಾರವಾರ: ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅಂತೂ ತಾವು ಮುಂಬರುವ ವಿಧಾನಸಭೆಯ ಚುನಾವಣೆಗೆ ಸ್ಪರ್ಧಿಸುವುದಾಗಿ ತಮ್ಮ ಬೆಂಬಲಿಗರಿಗೆ ಸ್ಪಷ್ಟಪಡಿಸಿದರು. ಆನಂದ್ ಅವರು ರಾಜಕೀಯಕ್ಕೆ ಮರಳಿ ಬರುವಂತೆ ಅಸ್ನೋಟಿಕರ್ ಅಭಿಮಾನಿಗಳು ನೀಡಿದ್ದ ಕರೆಗೆ ಸಾವಿರಾರು ಮಂದಿ ಅವರ  ಮನೆಗೆ ಮುತ್ತಿಗೆ ಹಾಕಿದ್ದರು. ತಮ್ಮ ರಾಜಕೀಯ ನಿಲುವು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು. ಅವರ  ಮನೆಯ ಮುಂದಿನ ರಸ್ತೆಯ  ಮೇಲೆ ಕುಳಿತು ‘ಬೇಕೆ ಬೇಕು ಆನಂದ್ ಬೇಕು. ಬರಲೇ ಬೇಕು ಆನಂದ್ ರಾಜಕೀಯಕ್ಕೆ ಬರಲೇ ಬೇಕು  ಎಂದು ಘೋಷಣೆಗಳನ್ನು ಕೂಗಿ, ಪ್ರತಿಭಟನೆ  ಕೂಡನಡೆಸಿದರು. ಈ ವೇಳೆ ತಮ್ಮ ಕಾರಿನಲ್ಲಿ ಅಲ್ಲಿಗೆ ಆಗಮಿಸಿದ ಆನಂದ್ ಅವರರನ್ನ ಅಭಿಮಾನಿಗಳು ಹಾರ, ತುರಾಯಿ, ಹೂವು ನೀಡಿ, ಘೋಷಣೆಗಳನ್ನು ಹಾಕುತ್ತಲೇ ಸ್ವಾಗತಿಸಿದರು. ಮೊದಲೇ ಅಣಿಗೊಳಿಸಿದ್ದ ಬೃಹತ್ಪಟಾಕಿಯನ್ನ ರಸ್ತೆಯ ಮೇಲೆ ಸಿಡಿಸಿ, ಸಂಭ್ರಮಿಸಿದರು. ಬಳಿಕ ಎಲ್ಲರನ್ನ ಉದ್ದೇಶಿಸಿ ಮಾತನಾಡಿದ ಅವರು,   ‘ನಾಲ್ಕೂವರೆ ವರ್ಷ ಜನರಿಂದ ದೂರ ಇರಲು ಬಹಳಷ್ಟು ಕಾರಣಗಳಿವೆ. ಮುಂದಿನ ಚುನಾವಣೆಗೆಸ್ಪರ್ಧಿಸಲು, ಅಭಿಮಾನಿಗಳನ್ನು  ಎದುರಿಸಲು ಧೈರ್ಯ ಇರಲಿಲ್ಲ. ಆದರೆ ಈ ಜನಸಾಗರವನ್ನು ನೋಡಿ ಈಗ ಸ್ವಲ್ಪ ಧೈರ್ಯ ಬರುತ್ತಿದೆ ಎಂದು ಮಾತು ಶುರು ಮಾಡಿದರು. ‘ನಾಲ್ಕೂವರೆ ವರ್ಷ ಯಾವುದೇ ವೇದಿಕೆಯಲ್ಲಿಯೂ ಭಾಷಣ ಮಾಡಿಲ್ಲ. ರಾಜ್ಯದ ಯಾವುದೇ ಪಕ್ಷದ, ಸಂಘಟನೆಯ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿಲ್ಲ. ಮನೆ ಬಿಟ್ಟು ಎಲ್ಲಿಯೂ ಹೋಗಿಲ್ಲ. ದೇಶದಲ್ಲಿ ಮೋದಿಯವರ ಅಲೆ ಇರೋದಿಕ್ಕೆ ಕಾರಣ ಅದು ರಾಹುಲ್ ಗಾಂಧಿ  ಇರುವುದರಿಂದ. ಇವತ್ತಿನ ಆಡಳಿತ ನೋಡಿ ಜನ ನನ್ನನ್ನ ಬೇಕು ಎನ್ನುತ್ತಿದ್ದಾರೆ. ಸದ್ಯ ಇರುವ ಆಡಳಿತ ಜನರಿಗೆಬೇಸರವಾಗಿ ಇವತ್ತು ನನ್ನನ್ನ ಎಲ್ಲರೂ ನೆನೆಸುತ್ತಾರೆ’ ಎಂದರು. ‘ಮಾಧ್ಯಮದವರು ಇದು ನಾಟಕ ಎಂದು ಹೇಳಬಹುದು. ಆದರೆ ಇಲ್ಲಿ ಎಲ್ಲರೂ ಅವರವರ ಸ್ವಂತ ಖರ್ಚಿನಿಂದ ಇಲ್ಲಿಗೆ ಬಂದಿದ್ದಾರೆ ಹೊರತು ನಾನೇನು ಮಾಡಿಲ್ಲ. ರಾಜ್ಯವೇ ಮೆಚ್ಚಿದ್ದ ರಾಜಕಾರಣಿ ನಮ್ಮತಂದೆ ವಸಂತ್ ಅಸ್ನೋಟಿಕರ್‌ ಅವರನ್ನ ದುಷ್ಕರ್ಮಿಗಳು ಗುಂಟಿಟ್ಟು ಕೊಂದರು. ಆಗ ೧೯ನೇ ವಯಸ್ಸಿನಲ್ಲಿ ತಂದೆಯ ಜವಾಬ್ದಾರಿ ವಹಿಸಿಕೊಂಡು ೫ ಚುನಾವಣೆಗಳನ್ನು ನೋಡಿದ್ದೀನಿ. ಪ್ರತಿಯೊಂದುಸಮಾಜದವರಿಗೂ ಅವರದೇ ಆದ ಸಭಾಭವನ ನಿರ್ಮಿಸಿಕೊಡಲು ಪ್ರಯತ್ನಿಸಿದ್ದೀನಿ. ಪ್ರತೀ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರಸ್ತೆಗಳನ್ನು ಮಾಡಿಸಿದ್ದೀನಿ. ಸೀಬರ್ಡ್ಯೋಜನೆಯ ನಿರಾಶ್ರಿತರಿಗೆ ಪರಿಹಾರ ಬಂದಿದೆ ಎಂದರೆ ಅದು ವಕೀಲ ದೇವದತ್ತ ಕಾಮತ್ ಅವರಿಂದ. ಅವರಿಗೆ ಅಭಿನಂದನೆಯನ್ನ ಸಲ್ಲಿಸಿದ್ದೇನೆ’ ಎಂದರು. ಉತ್ತರಕನ್ನಡ ಜಿಲ್ಲೆ ಬಹಳ ಹಿಂದುಳಿದಿದೆ. ಇಲ್ಲಿ ಅಲ್ಪ ಸಂಖ್ಯಾತರು, ಹಿಂದುಳಿದ ಸಮುದಾಯದವರು ಬಹಳಷ್ಟು ಇದ್ದಾರೆ. ೨೫ ವರ್ಷದಿಂದ ನನ್ನ ಕುಟುಂಬ ರಾಜಕೀಯದಲ್ಲಿದೆ. ನಾನು ಅಧಿಕಾರದಲ್ಲಿಇದ್ದಾಗ ವೈದ್ಯಕೀಯ ಕಾಲೇಜನ್ನು ಮೊದಲಿಗೆ ಜಿಲ್ಲೆಗೆ ತಂದಿದ್ದೇನೆ. ಅತೀ ಚಿಕ್ಕ ವಯಸ್ಸಿನಲ್ಲಿ    ರಾ ಜಕೀಯಕ್ಕೆ ಬಂದ ನಾನು ಕಾಲೇಜು ಜೀವನವನ್ನ ಸರಿಯಾಗಿ ಅನುಭವಿಸಿಲ್ಲ. ಕುಟುಂಬದ ಜತೆ ಇರಲಿಲ್ಲ. ಸಂಸಾರಕ್ಕೂ ಸರಿಯಾಗಿ   ಸಮಯ ನೀಡಿಲ್ಲ. ದಿನ ರಾಜಕೀಯದಲ್ಲಿದ್ದೆ. ಆದರೆ ಕಳೆದ ಚುನಾವಣೆಯ ಬಳಿಕದ ಈ ನಾಲ್ಕೂವರೆ ವರ್ಷ ನನಗೆ ಮಕ್ಕಳ ಜತೆ ಆಟ ಆಡಲು ಸಮಯ ಸಿಕ್ಕಿತು ಎಂದು ಆನಂದ್ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಮಾನಸಿಕವಾಗಿ ಜನರಿಂದ ನಾನು ಎಂದಿಗೂ ದೂರವಾಗಿಲ್ಲ. ಎಲ್ಲರ ಕರೆಗಳನ್ನು ಸ್ವೀಕರಿಸಿ, ಆದಷ್ಟು ಮೊಬೈಲ್‌ನಲ್ಲಿಯೇ ಪರಿಹಾರಕ್ಕೆ ಪ್ರಯತ್ನಿಸಿದ್ದೇನೆ. ನಮ್ಮ ತಾಯಿ ಸಾಮಾಜಿಕ ಕಾರ್ಯದಲ್ಲಿಸಕ್ರಿಯವಾಗಿದ್ದರು. ಅವರಿಂದಲೇ ನಾನಿನ್ನು ರಾಜಕೀಯದಲ್ಲಿರಲು ಸಾಧ್ಯವಾಯಿತು. ಜನರಿಂದ ೧೦ ದಿನದ ಸಮಯವಾಕಾಶ ಪಡೆದಿದ್ದೇನೆ. ಕ್ಷೇತ್ರದ ಪ್ರತಿಯೊಬ್ಬ ಹಿರಿಯರ ಸಲಹೆ ಪಡೆದು ರಾಜಕೀಯಕ್ಕೆಮರಳುತ್ತೇನೆ. ಯಾವ ಪಕ್ಷಕ್ಕೆ ಸೇರಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ. ಅದನ್ನು ಕ್ಷೇತ್ರದ ಜನತೆ ನಿರ್ಧರಿಸಬೇಕು ಎಂದರು. ರಲು ಸಾಧ್ಯ
Read More

ಗೋಕರ್ಣ:ಹಲವು ಸಮಸ್ಯೆಗಳ ಕುರಿತು ಜಯ ಕರ್ನಾಟಕ ಸಂಘ ಧ್ವನಿ ಎತ್ತಿದ್ದು, ಅದರಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಾರವಳಿ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಸ್ಥಳೀಯ ಶಾಸಕಿ ಶಾರದಾ…
Read More

ಯಲ್ಲಾಪುರ: ಪಂಚಾಯತ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಆಶ್ರಯದಲ್ಲಿ ಸಿ.ಎಂ.ಜಿ.ಎಸ್.ವಾಯ್ ಯೋಜನೆಯಡಿ 40 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ ವ್ಯಾಪ್ತಿಯ ತೋಳಗೋಡ-ಪುರದಮನೆ ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ…
Read More

ಶಿರಸಿ : ಸ್ವರ್ಣವಲ್ಲಿ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾಗಿ ಆರ್.ಎನ್.ಹೆಗಡೆ ಉಳ್ಳಿಕೊಪ್ಪ ಹಾಗೂ ಕಾರ್ಯದರ್ಶಿಯಾಗಿ ಸುರೇಶ್ ಹೆಗಡೆ ಹಕ್ಕೀಮನೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ…
Read More

. ಶಿರಸಿ: ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೆ ಸ್ಥಾನ ಪಡೆದ ಆದರ್ಶ ಹೆಗಡೆ ಹೊಸಳ್ಳಿ ಇವರನ್ನು ತಾಲೂಕಿನ ಗೊಣ್ಸರ ಶಾಲಾ ಆವರಣದಲ್ಲಿ ಈಚೆಗೆ ಶಾಲಾ ಆಡಳಿತ ಮಂಡಳಿ…
Read More

ಶಿರಸಿ : ಅಧಿವೇಶವನ್ನು ಬೆಳಗಾವಿಯಲ್ಲಿ ಆಯೋಜನೆ ಮಾಡುವುದು ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವಂತಹ ಕ್ರಮಗಳನ್ನು ಚರ್ಚಿಸಲು. ಆದರೆ ಬಿಜೆಪಿಯವರು ಅಲ್ಲಿ ಗಲಾಟೆಯ ವಿಚಾರ ಮಾಡುತ್ತಾರೆ. ಅದು ಸಲ್ಲ ಎಂದು…
Read More

ಭಟ್ಕಳ: ಶನಿವಾರದಂದು ಬೆಳಿಗ್ಗೆ ಭಟ್ಕಳ ಪುರಸಭೆಯ ಕಟ್ಟಡದೊಳಗಿನ ಅಂಗಡಿಕಾರರು, ಪುರಸಭೆಗೆ ಕೆಲಸ ಮಾಡುವ ಗುತ್ತಿಗೆದಾರರ ವ್ಯವಹಾರದಲ್ಲಿ ನಷ್ಟ ಸಂಭವಿಸಿದ್ದ ಕಾರಣ ಪುರಸಭೆ ಕೆಳಂತಸ್ತಿನÀಲ್ಲಿ ಬೆಳಿಗ್ಗೆ ಹೋಮ ಹವನಾದಿಗಳನ್ನು ನಡೆಸುವ…
Read More