Slide
Slide
Slide
previous arrow
next arrow

11 ಗ್ರಾ.ಪಂ ವ್ಯಾಪ್ತಿಯಲ್ಲಿ ಲಕ್ಷ ವೃಕ್ಷ ಅಭಿಯಾನ ಚಾಲನೆ:15 ಸಾವಿರ ಗಿಡ ನೆಡುವ ಗುರಿ

300x250 AD

ಕುಮಟ: ಅರಣ್ಯವಾಸಿಗಳಿಂದ ಅರಣ್ಯ ರಕ್ಷಣೆ, ಪರಿಸರ ಜಾಗೃತೆ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನಿರ್ಧಾರದಂತೆ ತಾಲೂಕಿನಾದ್ಯಂತ 11 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಶಸ್ವಿ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮ ಜರುಗಿದವು.

 ಮಿರ್ಜಾನ, ಬರ್ಗಿ, ಗೋಕರ್ಣ, ಹಿರೇಗುತ್ತಿ, ದಿವಗಿ, ಕೋಡ್ಕಣಿ, ಕತಗಾಲ, ಬಂಗಣೆ, ಕಲವೆ, ಸಂತೆಗುಳಿ, ಹೆಗಡೆ ಗ್ರಾಮ ಪಂಚಾಯತಗಳಲ್ಲಿ ಅರಣ್ಯವಾಸಿಗಳು ಆಸಕ್ತಿಯಿಂದ ಅರಣ್ಯ ಭೂಮಿ ಸಾಗುವಳಿ ಕ್ಷೇತ್ರದಲ್ಲಿ ವಿವಿಧ ರೀತಿಯ ಗಿಡ ನೆಟ್ಟಿರುವ ವರದಿಯಾಗಿದೆ.

 ತಾಲೂಕಿನಾದ್ಯಂತ ಸುಮಾರು 39 ಹಳ್ಳಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿದ್ದು, ಅಗಸ್ಟ 14 ರವರೆಗೆ ತಾಲೂಕಾದ್ಯಂತ ಸುಮಾರು 15 ಸಾವಿರ ಗಿಡ ನೆಡಲು ತೀರ್ಮಾನಿಸಿದ್ದೇವೆ ಎಂದು ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD

 ತಾಲೂಕಾದ್ಯಂತ ಜರುಗಿದ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮದ ನೇತೃತ್ವವನ್ನು ಸಾರಬಿ ಬೆಟ್ಕುಳಿ, ಯಾಕೂಬ ಸಾಬ್, ರಾಮಾ ಎಸ್ ಮಡಿವಾಳ, ನಾಗಪ್ಪ ಜಟ್ಟು ಗಾವಡಿಗ, ಸಂತೋಷ ಹನುಮಂತ ಭಟ್ಟ, ಮಂಗಲ ಜಿ, ಜ್ಯೋತಿ ಜಿ ಗಾವಡಾ, ಗುಲಾಬಿ ಗಣೇಶ ನಾಯ್ಕ, ಶಾರದಾ ಸೀತಾರಾಮ ನಾಯ್ಕ, ಸುರೇಶ ಪಟಗಾರ, ರಾಮಚಂದ್ರ ಸೋಮ ಮರಾಠಿ, ಶ್ರೀರಾಮ, ಗೋಪಾಲ, ರಾಧಾ, ಹುಲಿಯಪ್ಪ ಶಂಕರ ಗೌಡ, ಮಹಮ್ಮದ್ ಅಲಿ, ಮರಿಯಂಬಿ ಮುಂತಾದವರು ವಹಿಸಿದ್ದರು.

Share This
300x250 AD
300x250 AD
300x250 AD
Back to top