4- 9 ನೇ ತರಗತಿ ವರೆಗಿನ ತೇರ್ಗಡೆ ನಿಯಮ ಬದಲು


ಶಿರಸಿ: ಕೋವಿಡ್-19 ದೇಶದೆಲ್ಲೆಡೆ ವ್ಯಾಪಕವಾಗಿ ಹರಡಿರುವುದರಿಂದ, ಮಕ್ಕಳ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ನಾಲ್ಕರಿಂದ ಒಂಬತ್ತನೆ ತರಗತಿವರೆಗೆ ತೇರ್ಗಡೆ ನಿಯಮದ್ಲಿ ಬದಲಾಗಿದೆ. ನಾಲ್ಕರಿಂದ ಎಂಟನೆ ತರಗತಿಯವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ಈ ಮೊದಲು ನಡೆಸಿದ ಎಫ್‌ಎ1, ಎಫ್‌ಎ2, ಎಫ್‌ಎ3, ಎಫ್‌ಎ4, ಹಾಗೂ ಎಸ್‌ಎ1 ಪರೀಕ್ಷಾ ಫಲಿತಾಂಶದ ಆಧಾರದ ಮೇಲೆ ಉತ್ತೀರ್ಣಗೊಳಿಸಿ ಮುಂದಿನ ತರಗತಿಗೆ ಪ್ರವೇಶ ನೀಡಲಾಗುತ್ತದೆ ಎಂದು ಉಪನಿರ್ದೇಶಕರ ಕಚೇರಿಯಿಂದ ತಿಳಿಸಿದೆ.

ಈವರೆಗೆ ಎಸ್‌ಎ2 ಪ್ರತ್ಯೇಕವಾಗಿ ನಡೆಸಬೇಕಾಗಿಲ್ಲ. (ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್‌ಎ2 ನ 4 ವಿಷಯಗಳ ಪರೀಕ್ಷೆ ನಡೆದಿದೆ). ಆದರೆ 7 ನೇ ತರಗತಿಗೆ ಎಸ್‌ಎ2 ನಡೆದಿಲ್ಲ. 9ನೇ ತರಗತಿಗೆ ಎಫ್‌ಎ1, ಎಫ್‌ಎ2, ಎಫ್‌ಎ3, ಎಫ್‌ಎ4, ಮತ್ತು ಎಸ್‌ಎ1 ನ ಅಂಕಗಳ ಮೇಲೆ ಫಲಿತಾಂಶ ನೀಡಬಹುದಾಗಿದೆ. (ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್‌ಎ2 ನ 4 ವಿಷಯದ ಅಂಕ ಬಳಸಬಹುದಾಗಿದೆ)

ಇದರಲ್ಲಿ ವಿದ್ಯಾರ್ಥಿಗಳು ಕನಿಷ್ಠ ಸಿ ಪಡೆಯದಿದ್ದಲ್ಲಿ ಅವರಿಗೆ ರಜಾ ಅವಧಿಯಲ್ಲಿ ಪರೀಕ್ಷಾ ತಯಾರಿ ಮಾಡಿಕೊಳ್ಳಲು ತಿಳಿಸಿ, ಶಾಲೆ ಪ್ರಾರಂಭವಾದ ತಕ್ಷಣ ಆನ್‌ಲೈನ್ ಅಥವಾ ಆಫ್‌ಲೈನ್ ನಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.