ಸ್ಪೈಸಿ- ಸ್ಪೈಸಿ ಚಿಲ್ಲಿ ಇಡ್ಲಿ ಮಾಡಿ ಸವಿದು ನೋಡಿ


ಅಡುಗೆ ಮನೆ: ಮಹಾಮಾರಿ ಕೊರೋನಾದ ಅಟ್ಟಹಾಸದಿಂದಾಗಿ ದೇಶವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದೆ. ಮನೆಯಲ್ಲೇ ಕೂತು ಬೋರ್ ಬರುವುದಂತೂ ಸತ್ಯದ ಮಾತು. ಟೈಮ್ ಪಾಸ್‌ಗಾಗಿ ದಿನಾಲೂ ಒಂದೊಂದು ಬಗೆಯ ತಿಂಡಿಗಳನ್ನು ಮಾಡಿ ತಿಂದರೆ ನಮಗೆ ಒಂದಿಷ್ಟು ಸಮಯವೂ ಕಳೆಯುತ್ತದೆ ಹಾಗೆಯೇ ಹೊಸ ವಿಧದ ಅಡುಗೆಯನ್ನು ರೂಢಿಸಿಕೊಂಡಂಗೂ ಆಗುತ್ತದೆ. ಹಾಗೆಯೇ ಈ ದಿನ ಮಾಡಿ ನೋಡಿ ಚಿಲ್ಲಿ ಇಡ್ಲಿ.

ಬೇಕಾಗುವ ಪದಾರ್ಥಗಳು: ಇಡ್ಲಿ – 4-5, ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು, ಶುಂಠಿ- ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿದ್ದು 1 ಚಮಚ, ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 1 ಚಮಚ, ಈರುಳ್ಳಿ- ಮಧ್ಯಮ ಗಾತ್ರಕ್ಕೆ ಕತ್ತರಿಸಿದ್ದು 1 ಬಟ್ಟಲು, ಕ್ಯಾಪ್ಸಿಕಂ- 2-3 ಮೂರು, ಸೋಯಾ ಸಾಸ್- 1 ಚಮಚ, ಚಿಲ್ಲಿ ಸಾಸ್- 2 ಚಮಚ, ಟೊಮೆಟೋ ಕೆಟ್ಚಪ್ – 3 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕಾಳು ಮೆಣಸಿನ ಪುಡಿ- ಸ್ವಲ್ಪ, ಕೊತ್ತಂಬರಿ ಸೊಪ್ಪು- ಸ್ವಲ್ಪ.

ಮಾಡುವ ವಿಧಾನ: ಮೊದಲು ಇಡ್ಲಿಗಳನ್ನು ಕತ್ತರಿಸಿಕೊಳ್ಳಬೇಕು. ನಂತರ ಬಾಣಲೆಗೆ ಎಣ್ಣೆ ಹಾಕಿ. ಕಾದ ಎಣ್ಣೆಗೆ ಕತ್ತರಿಸಿಕೊಂಡಿದ್ದ ಇಡ್ಲಿಗಳನ್ನು ಹಾಕಿ ಚೆನ್ನಾಗಿ ಚಿನ್ನದ ಬಣ್ಣ ಬರುವವರೆಗೂ ಕರಿದುಕೊಳ್ಳಬೇಕು. ಬಾಣಲೆಗೆ 3-2 ಚಮಚ ಎಣ್ಣೆ ಹಾಕಿ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹುರಿದುಕೊಳ್ಳಬೇಕು. ನಂತರ ಈರುಳ್ಳಿ. ಕ್ಯಾಪ್ಸಿಕಂ ಹಾಕಿ ಕೆಂಪಗೆ ಹುರಿದು ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೋ ಕೆಟ್ಚಪ್ ಹಾಕಿ 3-5 ನಿಮಿಷ ಬೇಯಲು ಬಿಡಬೇಕು. ಬಳಿಕ ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಈಗಾಗಲೇ ಎಣ್ಣೆಯಲ್ಲಿ ಕರಿದಿಟ್ಟುಕೊಂಡ ಇಡ್ಲಿ ಪೀಸ್ ಗಳನ್ನು ಹಾಕಿ ಮಿಶ್ರಣ ಮಾಡಿ, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಹಾಗೂ 10 ನಿಮಿಷಗಳಲ್ಲಿ ಮಾಡಬಹುದಾದ ಚಿಲ್ಲಿ ಇಡ್ಲಿ ಸವಿಯಲು ಸಿದ್ಧ.

Categories: ಅಡುಗೆ ಮನೆ

Leave A Reply

Your email address will not be published.