ಪಟ್ಟಣದ ಪ್ರಮುಖ ಓಣಿಗೆ ಕೊರೊನಾ ಸೋಂಕು ನಿವಾರಕ ಔಷಧಿ ಸಿಂಪಡನೆ

ಮುಂಡಗೋಡ: ತಾಲೂಕಾ ಆಡಳಿತದ ವತಿಯಿಂದ ಅಗ್ನಿಶಾಮಕ ಸಿಬ್ಬಂದಿ ಪಟ್ಟಣದ ಪ್ರಮುಖ ಓಣಿಗಳಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸಿದರು.
ಶುಕ್ರವಾರ ಅಗ್ನಿಶಾಮಕ ಸಿಬ್ಬಂದಿಯು ಪಟ್ಟಣದ ನಾಲ್ಕು ರಸ್ತೆಗಳ ಅಕ್ಕ ಪಕ್ಕದಲ್ಲಿರುವ ಅಂಗಡಿಗಳು ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲ ಕಡೆ ಸೋಂಕು ನಿವಾರಕವನ್ನು ಸಿಂಪಡಿಸಿ. ಈ ಮೂಲಕ ಸಣ್ಣ- ಪುಟ್ಟ ಕ್ರಿಮಿ ಕೀಟಗಳ ನಾಶಕ್ಕೆ ಕ್ರಮ ಕೈಗೊಂಡರು.

ಪಟ್ಟಣದ ಶಿವಾಜಿ ಸರ್ಕಲ್‍ನಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸಲು ತಹಶೀಲ್ದಾರ ಶ್ರೀಧರ ಮುಂದಲಮನಿ ಚಾಲನೆ ನೀಡಿದರು. ಮುಖ್ಯಾಧಿಕಾರಿ ಸಂಗನಬಸಯ್ಯಾ ಹಾಗೂ ತಾಲೂಕ ಪಂಚಾಯತ ಇಒ ಪ್ರವೀಣ ಕಟ್ಟಿ ಉಪಸ್ಥಿತರಿದ್ದರು.

ಸ್ಥಳಿಯ ನಿವಾಸಿ: ಉಮೇಶ ಬಿ ಮಾತನಾಡಿ ಪ್ರಮುಖ ರಸ್ತೆಯಲ್ಲಿ ಸೋಂಕು ನಿವಾರಕವನ್ನು ಒಳ್ಳೆಯ ಉದ್ದೇಶ ಆದರೆ ಇದರ ಜೊತೆಗೆ ಬಹುತೇಕ ಜನರು ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಸಾರ್ವಜನಿಕರು ವಾಸಿಸುವುದರಿಂದ ಇಂತಹ ಕಾರ್ಯಾಚರಣೆಯನ್ನು ಪಟ್ಟಣದ ವಾರ್ಡ್‍ಗಳಲ್ಲಿ ಮಾಡಿದರೆ ಅನುಕೂಲವಾಗುತ್ತದೆ. ಪ್ರಮುಖ ಬೀದಿಗಳಲ್ಲಿ ಹೊಡೆಯುವುದರಿಂದ ಯಾರಿಗೂ ಅನುಕೂಲ ಆಗುವುದಿಲ್ಲವೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.