ಅಡಿಕೆ ತೋಟದಲ್ಲಿ ಹೆಡೆಯೆತ್ತಿ ನಿಂತ 11 ಅಡಿ ಕಾಳಿಂಗ ಸರ್ಪ; ಮುಂದೆನಾಯ್ತು ..!

ಸಿದ್ದಾಪುರ: ಅಡಕೆ ತೋಟದಲ್ಲಿ ಕಾಣಿಸಿಕೊಂಡ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಮನೋಹರ ಶಿರಸಿ ಅವರು ಹಿಡಿದು ಮಾವಿನಗುಂಡಿ ಸಮೀಪದ ಕತ್ತಲೆಕಾನಿಗೆ ಬಿಟ್ಟಿದ್ದಾರೆ.

ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಮಟ್ಟೆಮನೆ ಮಂಜುನಾಥ ತ್ರಯಂಬಕ ಹೆಗಡೆ ಅವರ ತೋಟದಲ್ಲಿ ಶನಿವಾರ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಉರಗ ತಜ್ಞರು ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಈ ವೇಳೆ ಉಪವಲಯ ಅರಣ್ಯಾಧಿಕಾರಿ ವಿನಾಯಕ ಮಡಿವಾಳ,ಮಾರುತಿ ನಾಯ್ಕ ಹಾಗೂ ಇತರರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.