ಇಟಲಿಯಿಂದ ಬಂದು ಕೈಗೆ ಚಪ್ಪೆ ಹಾಕಿಸಿಕೊಂಡಿದ್ದರೂ ಶಿರಸಿಯಲ್ಲಿ ಓಡಾಡಿದ ವ್ಯಕ್ತಿ.! ಎಚ್ಚರ..ಕಟ್ಟೆಚ್ಚರ !

ಶಿರಸಿ: ತಾಲೂಕಿನ ಬನವಾಸಿ ಸಮೀಪದ ಜಡೆ ಮೂಲದ ಗಿರೀಶ (35) ಇಟಲಿಯಿಂದ ಸ್ವದೇಶಕ್ಕೆ ಬಂದು ಆರೋಗ್ಯ ತಪಾಸಣೆಯವರಿಂದ ಕೈಗೆ ಚಪ್ಪೆ ಹಾಕಿಸಿಕೊಂಡಿದ್ದರೂ ಸರ್ಕಾರಿ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಬೆಂಗಳೂರಿನಿಂದ ಶಿರಸಿಗೆ ಆಗಮಿಸಿ ಸೋಮವಾರ ಶಿರಸಿಯಲ್ಲಿಳಿದು ಕೆಲವಡೆ ಸುತ್ತಾಡಿ, ಹಲವರನ್ನು ಭೇಟಿ ಮಾಡಿ ನಂತರ ಖಾಸಗಿ ವಾಹನದ ಮೂಲಕ ಸ್ವಂತೂರು ಜಡೆಗೆ ತೆರಳಿದ ಘಟನೆ ಸಂಭವಿಸಿದೆ.

14 ದಿನಗಳ ಗೃಹಬಂಧನದಲ್ಲಿ ಇರಬೇಕಾದ ವ್ಯಕ್ತಿ ಹೀಗೆ ಸಾರಿಗೆ ವಾಹನದಲ್ಲಿ ಪ್ರಯಾಣಿಸಿದ್ದು ಸಹಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದು, ಅವರು ಈ ಬಗ್ಗೆ ಚರ್ಚಿಸಿ ಸ್ಥಳೀಯ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ, ವೈದ್ಯರನ್ನು ಹಾಗು ಕೆಲವು ಅಧಿಕಾರಿಗಳನ್ನು ಆತನ ಊರಾದ ಜಡೆಗೆ ಕಳುಹಿಸಿ ತಪಾಸಣೆ ನಡೆಸಿ, 14 ದಿನಗಳ ಕಾಲ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.

ಇಟಲಿಯಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ಶಿರಸಿಗೆ ಬಂದಿದ್ದು ಗೃಹಬಂಧನದಲ್ಲಿರಬೇಕಾದ ಈತ ಹೀಗೆಲ್ಲ ಓಡಾಡಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.