ಉತ್ತರ ಕನ್ನಡದಲ್ಲಿ ಮಾ.24 ರಿಂದ 30 ರ ವರೆಗೆ ಸೆ.144 ಜಾರಿ: ಜಿಲ್ಲಾಧಿಕಾರಿ

ಕಾರವಾರ: ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋವಿಡ್-19 ವೈರಾಣುಗಳಿಂದ ಸೊಂಕಿತರಾದವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಜಿಲ್ಲೆಯ ಜನತೆಗೆ ಸಾಕಷ್ಟು ಸೂಚನೆ ತಿಳುವಳಿಕೆ ನೀಡಿದ್ದಾಗಿಯೂ ಸಹ ಅವರು ಸಕಾರತ್ಮಕವಾಗಿ ಸ್ಪಂದಿಸದಿರುವ ಹಿನ್ನಲೆಯಲ್ಲಿ ಮಾ. 24 ಮಂಗಳವಾರ ಮುಂಜಾನೆ 6 ಗಂಟೆಯಿಂದ ಮಾ. 30 ರ ಮಧ್ಯರಾತ್ರಿ 12 ರ ವರೆಗೆ ಜಿಲ್ಲೆ ಕಲಂ 144 ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಆದೇಶಿಸಿದ್ದಾರೆ.

ವಿದೇಶದಿಂದ ಆಗಮಿಸುತ್ತಿರುವ ಸ್ಥಳೀಯ ನಿವಾಸಿಗಳ ಸಂಖ್ಯೆಯೂ ಸಹ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಗುಂಪುಗಳಲ್ಲಿ ಓಡಾಡುವುದು, ಸಮೂಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಂಡುಬಂದಿದ್ದು, ಈ ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ ಪರಿಸ್ಥಿತಿ ನಿಯಂತ್ರಣ ಮೀರುವ ಸಂಭವವಿರುತ್ತದೆ.

ಉತ್ತರ ಕನ್ನಡ ಜಿಲ್ಲೆಯ ನಾಗರಿಕರಿಗೆ ನಿಗದಿತ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಗುಪ್ತ ಸೇರುವುದನ್ನು ತಡೆಗಟ್ಟಲು, ಸಮಾರಂಭ, ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ದಿನಪತ್ರಿಕೆ ಮತ್ತು ಇನ್ನಿತರೇ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಆದರೂ ಜನತೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕೋವಿರ್-19 ವೈರಾಣುವಿನ ಸೋಂಕು ಪಸರಿಸಲು ಪೂರಕವಾಗುವಂತೆ 05 ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ಓಡಾಡುವುದು ಅಥವಾ ಇನ್ನಿತರ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಡೆಯಲು ದಂಡ ಪ್ರಕ್ರಿಯಾ ಸಂಹಿತ ಕಲಂ 144 ರನ್ವಯ ನಿಷೇದಾಜ್ಞೆ ಜಾರಿಗೊಳಿಸುವುದು ಸೂಕ್ತವೆಂದು ಅವರು ತಿಳಿಸಿದ್ದಾರೆ.

ಈ ಅವಧಿಯಲ್ಲಿ 5 ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಓಡಾಡುವುದು ಅಥವಾ ಇನ್ನಿತರ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ.
euttarakannada.in

Categories: ಜಿಲ್ಲಾ ಸುದ್ದಿ

1 Comment

  1. Vishweshwarayya Madnallimath

    Good initiative against covid- 19 and hope all things like Regular consumable will reach market ASAP.
    That will help us lead this situation comfortably.

    Reply

Leave A Reply

Your email address will not be published.