ಕೊರೋನಾ ಭೀತಿ; ಸ್ವರ್ಣವಲ್ಲೀ ಮಠಕ್ಕೆ ಕೆಲ ದಿನ ಪ್ರವಾಸಿಗರ ನಿರ್ಬಂಧ

ಶಿರಸಿ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪ.ಪೂ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ನಿರ್ದೇಶನದಂತೆ ಕೊರೊನಾ ವೈರಸ್ ಪ್ರಸರಣ ನಿಯಂತ್ರಿಸಲು ಸರಕಾರದ ಆದೇಶ ಪಾಲನೆ ನಿಮಿತ್ತವಾಗಿ ಭಕ್ತಾದಿಗಳು ಇನ್ನು ಕೆಲವು ದಿನಗಳ ಕಾಲ ಶ್ರೀಮಠಕ್ಕೆ ಆಗಮಿಸಬಾರದು ಎಂದು ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯಾದ್ಯಂತ ಕೊರೋನಾ ವೈರಸ್ ಎಲ್ಲೆಡೆ ಹರಡುತ್ತಿದ್ದು, ಬೇರೆ- ಬೇರೆ ಊರುಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದ್ದರಿಂದ ಕೊರೋನಾ ವೈರಸ್ ಭೀತಿಯಿಂದಾಗಿ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಹಾಗೆಯೇ ಶ್ರೀ ಮಠದಲ್ಲಿ ಮುಂದಿನ 20 ದಿನದಲ್ಲಿ ನಡೆಯುವ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಿದೆ. ಭಕ್ತಾದಿಗಳು ತಮ್ಮ-ತಮ್ಮ ಮನೆಗಳಲ್ಲಿ ಕೈಕೊಳ್ಳಲು ನಿರ್ಧರಿಸಿರುವ ಮಂಗಲಕಾರ್ಯ ಇತ್ಯಾದಿಗಳನ್ನು ಕಡ್ಡಾಯವಾಗಿ ಮುಂದೂಡಬೇಕು ಎಂದು ಶ್ರೀಗಳು ಹೇಳಿದ್ದಾರೆ.

Categories: ಜಿಲ್ಲಾ ಸುದ್ದಿ

1 Comment

  1. ಅನಂತ ಹೆಗ್ಡೆ ,ಬಾಳೇಗದ್ದೆ 9483294189

    ಖೇದಕರ ಬೆಳವಣಿಗೆ ಆದರೆ ಅನಿವಾರ್ಯ .ಶ್ರೀ ಗಳ ಆದೇಶವನ್ನು ತಪ್ಪದೇ ಪಾಲಿಸಬೇಕು. ಮನೆಯಲ್ಲಿ ನಿತ್ಯವೂ ಕಷ್ಟ ನಿವಾರಣೆಗೆ ತಾಯಿ ಶ್ರೀರಾಜ ರಾಜೇಶ್ವರಿ ಯಲ್ಲಿ ಬೇಡಿ ಕೊಳ್ಳೋಣ

    Reply

Leave A Reply

Your email address will not be published.