ಸುವಿಚಾರ

ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ನ ದುರ್ಭಾಷಿಣೀ
ಸನ್ಮಿತ್ರಂ ಸುಧನಂ ಸ್ವಯೋಷಿತಿ ರತಿಶ್ಚಾಜ್ಞಾಪರಾಃ ಸೇವಕಾಃ
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋಃ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||

ಆನಂದಪೂರ್ಣವಾದ ಮನೆ, ಒಳಿತಿನ ಬುದ್ಧಿಯ ಔರಸ ಪುತ್ರರು, ಕೆಡುನುಡಿಯನಾಡದ ಹೆಂಡತಿ, ಒಳ್ಳೆಯ ಮಿತ್ರರು, ಭೋಗ್ಯಕ್ಕಿಷ್ಟು ಹಣ, ತನ್ನವಳಾದ ಹೆಣ್ಣಿನಲ್ಲಿ ಮಾತ್ರ ನಡೆಸುವ ರತಿ, ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವ ಆಳುಗಳು, ಪ್ರತಿ ದಿನ ಮನೆಯಲ್ಲಿ ನಡೆಯುವ ಅತಿಥಿ ಸತ್ಕಾರ, ಶಿವನ ಅರ್ಚನೆ, ಹೊಟ್ಟೆ ತುಂಬ ಉಣ್ಣಲು ಲಭ್ಯವಿರುವ ತಿಂಡಿ ತಿನಿಸು ತೀರ್ಥಗಳು, ಬದುಕಿನ ಹಾದಿಯು ಕೆಡದಂತೆ ಕಾಯುವ ಸಜ್ಜನರ
ಸಂಗ- ಆಹಾ, ಇವೆಲ್ಲ ಸೇರಿ ಒದಗುವುದಾದರೆ ಗೃಹಸ್ಥಾಶ್ರಮದ ಜೀವನವೇ ಧನ್ಯ ಧನ್ಯ. ಇವಿಷ್ಟರಲ್ಲಿ ಒಂದು ಕೆಟ್ಟರೂ ಗೃಹಸ್ಥಾಶ್ರಮವೆಂದರೆ ಶ್ರಮಭಾರ; ಅಲ್ಲವೇ?

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

1 Comment

  1. ಅನಂತ ಹೆಗ್ಡೆ ,ಬಾಳೇಗದ್ದೆ 9483294189

    ಈ ಎಲ್ಲ ಸುಖ ಅನುಭವಿಸಲು ಯೋಗ್ಯ ಮಾನಸಿಕ ಹಾಗೂ ದೈಹಿಕ ಆರೋಗ್ಯ ನಮಗೆ ಮತ್ತು ನಮ್ಮವರಿಗೆ ಇರುವುದು ಅವಶ್ಯಕ, ಅಲ್ಲವೇ?

    Reply

Leave A Reply

Your email address will not be published.