ಸುವಿಚಾರ

ಸಂಪತ್ ಸರಸ್ವತೀ ಸತ್ಯಂ ಸಂತಾನಂ ಸದನುಗ್ರಹಃ
ಸತ್ತಾ ಸುಕೃತಸಂಭಾರಃ ಸಕಾರಾ ದಶ ದುರ್ಲಭಾಃ ||

ಬದುಕಿನಲ್ಲಿ ಹಲವಾರು ಸಂಗತಿಗಳು ನಮ್ಮ ಕೈಲಿ ಇರುವುದಿಲ್ಲ. ಅವು ನಮ್ಮ ಪೂರ್ವಕರ್ಮಗಳಿಂದಲೋ, ಪೂರ್ವಿಕರ ಕರ್ಮಗಳಿಂದಲೋ ಮೊದಲೇ ನಿರ್ಣಯವಾಗಿ ಇದ್ದಿರುತ್ತವೆ. ಕೆಲವು ಸಂಗತಿಗಳು ನಮ್ಮ ಪ್ರಯತ್ನಕ್ಕೆ ತಕ್ಕಂತೆ ಇರುತ್ತವೆ ಅಂದುಕೊಂಡರೂ ಬದುಕಿನಲ್ಲಿ ಅವು ದುರ್ಲಭವೆಂದು ಹೇಳಲಾಗಿದೆ. ಸಂಪತ್ತು, ವಿದ್ಯೆ, ಸತ್ಯದ ಹಾದಿ, ಸಂತಾನ, ಸಜ್ಜನರ ಅನುಗ್ರಹ, ಒಳ್ಳೆಯತನ, ಮತ್ತು ಒಳ್ಳೆಯದನ್ನು ಸಾಧಿಸಲು ಬೇಕಾದ ಸಾಮಗ್ರಿ – ಈ ಹತ್ತು ಸಂಗತಿಗಳು ಕಷ್ಟೇನ ಸಾಧ್ಯವಾದವುಗಳು. ಅದರಲ್ಲಿಯೂ ಸತ್ಯ ಮತ್ತು ಒಳಿತಿನ ಹಾದಿಯ ಪ್ರಯಾಣವಂತೂ ಇನ್ನಿಲ್ಲದಷ್ಟು ಕಷ್ಟಕರವಾಗಿದೆ. ಲೋಕದ ಬದುಕಿನಲ್ಲಿ ಕೆಡುಕು ಮತ್ತು ಅಸತ್ಯಗಳ ಆಚರಣೆಯೇ ಅನಿವಾರ್ಯವೆನ್ನುವ ಸಂದರ್ಭವೂ ಎದುರಾಗಬಹುದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

1 Comment

  1. Shrisharan acharya

    1 ಸಂಪತ್ 2 ಸರಸ್ವತೀ 3ಸತ್ಯಂ 4ಸಂತಾನ 5 ಸತ್ ಅನುಗ್ರಹ 6 ಸತ್ತಾ 7 ಸುಕೃತ 8 ಸಂಭಾರ್ (ಸುಕೃತ ) ಅಷ್ಟ ದುರ್ಲಭ

    Reply

Leave A Reply

Your email address will not be published.