ಸರ್ಕಾರವೇ ಶರಾವತಿ ತೀರಕ್ಕೆ ಅಲೆ ತಡೆಗೋಡೆ ನಿರ್ಮಿಸಲಿ; ಸಾರ್ವಜನಿಕರ ಪ್ರತಿಭಟನೆ; ಸಹಾಯಕ ಆಯುಕ್ತರಿಗೆ ಮನವಿ

ಹೊನ್ನಾವರ: ಇಲ್ಲಿನ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೀಡಿದ ಗುತ್ತಿಗೆಯನ್ನು ರದ್ದುಗೊಳಿಸಿ ಅವರ ಕಾರ್ಯಚಟುವಟಿಕೆಯನ್ನು ಕೂಡಲೇ
ಸ್ಥಗಿತಗೊಳಿಸಬೇಕು. ಸರಕಾರವೇ ಕಾಳಜಿ ವಹಿಸಿ ಅತೀ ಶೀಘ್ರದಲ್ಲಿ ಶರಾವತಿ ಅಳವಿಗೆ ಅಲೆತಡೆಗೋಡೆ ನಿರ್ಮಿಸಬೇಕೆಂದು ವಿವಿಧ ಮೀನುಗಾರಿಕಾ ಸಂಘಟನೆಗಳ, ಊರ ನಾಗರಿಕರ ನೇತೃತ್ವದಲ್ಲಿ ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಹೊನ್ನಾವರ ಪೋರ್ಟ್ ಕಂಪನಿ ಎಂಬ ಹೆಸರಿನಲ್ಲಿ ಆಂಧ್ರದ ಗುತ್ತಿಗೆದಾರರೊಬ್ಬರು ಶರಾವತಿ ಸಂಗಮದ ಅಳವೆ ಸಹಿತ 100 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಬಂದರು ನಿರ್ಮಾಣ ಕಾಮಗಾರಿ ಈ ಹಿಂದೆಯೆ ಆರಂಭಿಸಿದ್ದರು ಹಿಂದಿನ ಬಿಜೆಪಿ ಸರ್ಕಾರದ ಸಚಿವರಾದ ಕೃಷ್ಣ ಪಾಲೇಮರ್ ಅಂದು ಬಂದರಿಗೆ ಅನುಮತಿ ನೀಡಿದ್ದರು. ಮೀನುಗಾರರಿಗೆ, ಮೀನುಗಾರಿಕೆಗೆ ತೊಂದರೆ ಇಲ್ಲದಂತೆ ಅವರಿಗೆ ಉದ್ಯೋಗ ಕೊಟ್ಟು, ಬಂದರು ಮಾಡುವುದಾಗಿ ಭರವಸೆ ಕೊಟ್ಟ ಕಂಪನಿ ತನ್ನ ಭರವಸೆ ಈಡೇರಿಸಿಲ್ಲ. ಅಲ್ಲದೇ ಮೀನುಗಾರಿಕೆಗೆ ತೀವ್ರ ತೊಂದರೆ ಉಂಟಾಗಿದೆ ಎನ್ನುವುದು ಪ್ರತಿಭಟನಾ ನಿರತರ ಅಳಲಾಗಿದೆ. ಮಹಿಳೆಯರು, ಪುರುಷರು, ಹಿಂದೂ ಮುಸ್ಲಿಂ ಕ್ರಿಸ್ತರೆನ್ನದೆ ಎಲ್ಲರೂ ಒಗ್ಗೂಡಿ ಮೀನುಗಾರಿಕೆಗೆ ರಜೆ ನೀಡಿ ಬೃಹತ್ ಪ್ರತಿಭಟನೆ ನಡೆಸಿದರು. ಶಾಸಕರುಗಳಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳು ವೈದ್ಯ ಮೊದಲಾದವರು ಮೀನುಗಾರರ ಅಹವಾಲನ್ನು ಕೇಳಿಕೊಂಡು ಸೂಕ್ತ ಪರಿಹಾರವನ್ನು ಒದಗಿಸಲಿದ್ದೇವೆ ಮಾತ್ರವಲ್ಲ ಅಲ್ಲಿಯವರೆಗೆ ಕೆಲಸ ನಿಲ್ಲಿಸುತ್ತೇವೆ ಎಂದು ಭರವಸೆಕೊಟ್ಟರು. ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ ಮನವಿ ಸ್ವಿಕರಿಸಿದರು, ತಹಶೀಲ್ದಾರ ವಿವೇಕ ಶೇಣ್ವಿ ಮೊದಲಾದವರು ಉಪಸ್ಥಿತರಿದ್ದರು.

ಸರ್ಕಾರ ನಮಗೆ ಸ್ಪಂದಿಸದೆ ಇದ್ದಲ್ಲಿ ಹಾಗೂ ಒಂದು ವಾರದ ಒಳಗಡೆ ನಮ್ಮ ಅಹವಾಲಿನ ಕುರಿತು ಚರ್ಚಿಸದೇ ಇದ್ದಲ್ಲಿ ಮುಂದಿನ ದಿನದಲ್ಲಿ ಕರಾವಳಿ ಜಿಲ್ಲೆಗಳ ಮೀನುಗಾರರ ಸಂಘಟನೆಗಳ ಜೊತೆ ಹೋರಾಟವನ್ನು ತೀವೃಗೊಳಿಸಿ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಕರಾವಳಿ ಮೀನುಗಾರರ ಕಾರ್ಮಿಕರ ಸಂಘದ ಅಧ್ಯಕ್ಷ ಅಶೋಕ ಕಾಸರಕೋಡ,ಪರ್ಶಿಯನ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ಹಮ್ಜಾ ಸಾಬ್ , ಕಾರ್ಯದರ್ಶಿ ವಿವಿನ್ ಫರ್ನಾಂಡಿಸ್ ಸೇರಿದಂತೆ ಮೀನುಗಾರ ಮುಖಂಡರು ಮಾತನಾಡಿ ಇಂಥ ಕಂಪನಿಗಳಿಗೆ ಲಾಭ ಮಾಡಿಕೊಳ್ಳಲು ನೂರಾರು ಎಕರೆ ಜಾಗವನ್ನು ಸಲೀಸಾಗಿ ಮಂಜೂರು ಮಾಡಿ ಕೊಡಲಾಗುತ್ತದೆ. ಆದರೆ ಸುಮಾರು 60-70 ವರ್ಷಗಳ ಹಿಂದೆ ಪ್ರಕೃತಿ ವಿಕೋಪದಿಂದ ಕಡಲಿನ ಒಡಲನ್ನು ಸೇರಿ ಕಣ್ಮರೆ ಆಗಿರುವ ಮಲ್ಲುಖುರ್ವಾ ಎಂಬ ಗ್ರಾಮದಿಂದ ಮನೆಮಠಗಳನ್ನು ಕಳೆದುಕೊಂಡು ಈಗಿನ ಟೊಂಕಾ-ಕಾಸರಕೋಡ್ ಗ್ರಾಮಕ್ಕೆ ಬಂದು ನೆಲೆ ನಿಂತು ಜೀವನ ಸಾಗಿಸುತ್ತಿರುವ ಪಾರಂಪರಿಕ ಮೀನುಗಾರರಿಗೆ ಇಲ್ಲಿಯವರೆಗೆ ಹಕ್ಕುಪತ್ರವಾಗಲಿ,ಪಹಣಿಪತ್ರವಾಗಲಿ ಮಂಜೂರಾಗಿಲ್ಲ.

ಸರ್ಕಾರದ ವಸತಿ ಸೌಲಭ್ಯ ನಮಗೆ ಸಿಗುತ್ತಿಲ್ಲ.ಈ ಬಂದರಿನಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಪಾಯಕಾರಿ ವಸ್ತುಗಳು ಆಯಾತ,ನಿರ್ಯಾತವಾದರೆ ಇದರ ಪರಿಣಾಮ ಕೇವಲ ಹೊನ್ನಾವರ ಅಷ್ಟೆ ಅಲ್ಲ.ಸುತ್ತಮುತ್ತಲ ತಾಲೂಕು, ಜಿಲ್ಲೆಗಳು ಜನ, ಜಾನುವಾರು, ವಾತಾವರಣದ ಮೇಲೆ ಘೋರಪರಿಣಾಮವಾಗಲಿದೆ. ರೈತರು, ವಯೋವೃದ್ಧರು, ವಿದ್ಯಾರ್ಥಿಗಳು ಕೂಡ ಗಂಭೀರವಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇಂದು ಶಾಂತಿಯುತವಾಗಿ ನಡೆದ ಪ್ರತಿಭಟನೆ ಮುಂದಿನ ದಿನಗಳಲ್ಲಿ ಉಗ್ರ ರೂಪದಲ್ಲಿ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.

ಟ್ರೋಲರ್ ಬೋಟ್ ಸಂಘದ ಅಧ್ಯಕ್ಷ ರಾಮಚಂದ್ರ ಹರಿಕಂತ್ರ, ಸಗಟು ಮೀನು ವ್ಯಾಪಾರಸ್ಥ ಸಂಘದ ಗಣಪತಿ ತಾಂಡೇಲ್, ಭಾಸ್ಕರ್ ತಾಂಡೆಲ್, ಉಮೇಶ್ ಮೇಸ್ತ,ಅಜಿತ್ ತಾಂಡೆಲ್ ಸೇರಿದಂತೆ 2 ಸಾವಿರಕ್ಕೂ ಅಧಿಕ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.