ತಿನ್ನಲು ಸವಿಯಾದ ಈರುಳ್ಳಿ ಪರೋಟ

ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು 2 ಕಪ್, ಈರುಳ್ಳಿ 3, ಕೊತ್ತಂಬರಿ ಸೊಪ್ಪು 1 ಕಟ್ಟು, ಗರಂಮಸಾಲ ಪುಡಿ 4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 1/4 ಬಟ್ಟಲು.

ಮಾಡುವ ವಿಧಾನ: ಮೊದಲಿಗೆ ಗೋಧಿ ಹಿಟ್ಟಿಗೆ ಉಪ್ಪು ಸ್ವಲ್ಪ ಎಣ್ಣೆ ಹಾಕಿ ಬೇಕಾದಷ್ಟು ನೀರು ಹಾಕಿ ಗಟ್ಟಿಯಾಗಿ ಕಲಿಸಿಕೊಳ್ಳಿ. ಒಂದು ಪ್ಲೇಟಿನಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಚಿಟಿಕೆ ಉಪ್ಪು, ಗರಂ ಮಸಾಲ ಇವುಗಳ ಮಿಶ್ರಣ ಮಾಡಿಕೊಳ್ಳಿ. ಈಗ ಗೋಧಿ ಹಿಟ್ಟಿನ ಚಿಕ್ಕ- ಚಿಕ್ಕ ಉಂಡೆ ಮಾಡಿ ಅಂಗೈ ಅಗಲ ಲಟ್ಟಿಸಿ ಅದರಲ್ಲಿ 2 ಚಮಚ ಮಿಶ್ರಣವನ್ನು ಹಾಕಿ ಎಲ್ಲ ಬದಿಯಿಂದ ಮುಚ್ಚಿ ಪರೋಟದಂತೆ ಲಟ್ಟಿಸಿ. ಕಾದ ಕಾವಲಿಯ ಮೇಲೆ ಎಣ್ಣೆ ಹಾಕಿ ಈ ಪರೋಟವನ್ನು ಎರಡೂ ಕಡೆ ಕಾಯಿಸಿ. ಬೆಣ್ಣೆ ಅಥವಾ ತುಪ್ಪದೊಂದಿಗೆ ಸವಿದರೆ ತುಂಬಾ ರುಚಿಯಾಗಿರುತ್ತದೆ.

Categories: ಅಡುಗೆ ಮನೆ

Leave A Reply

Your email address will not be published.