ಸುವಿಚಾರ

ನರಪತಿಹಿತಕರ್ತಾ ದ್ವೇಷ್ಯತಾಂ ಯಾತಿ ಲೋಕೇ ಜನಪದಹಿತಕರ್ತಾ ತ್ಯಜ್ಯತೇ ಪಾರ್ಥಿವೇನ |
ಇತಿ ಮಹತಿ ವಿರೋಧೇ ವಿದ್ಯಮಾನೇ ಸಮಾನೋ ನೃಪತಿಜನಪದಾನಾಂ ದುರ್ಲಭಃ ಕಾರ್ಯಕರ್ತಾ ||

ರಾಜನಿಗೆ ಹಿತವಾದುದನ್ನು ಮಾಡುವ ಅಧಿಕಾರಿಯು ಸಮಾಜದ ಜನರಿಂದ ದ್ವೇಷಿಸಲ್ಪಡುತ್ತಾನೆ. ಜನರಿಗೆ ಹಿತವಾದುದನ್ನು ಮಾಡಲು ತೊಡಗುವ ಅಧಿಕಾರಿಯು ರಾಜನಿಗೆ ಮೆಚ್ಚಿನವನಾಗುವುದಿಲ್ಲ. ಹೀಗೆಪರಸ್ಪರ ವಿರುದ್ಧವಾದ ಎರಡು ಸ್ಥಿತಿಗಳ ಮಧ್ಯೆ ಬದುಕುತ್ತಿದ್ದೂ ರಾಜ ಮತ್ತು ಜನರಿಂದ ಆದರಿಸಲ್ಪಡುವ ಕಾರ್ಯಕರ್ತ (ಎಕ್ಸಿಕ್ಯೂಟರಿ) ಇರುವುದು ಲೋಕದಲ್ಲಿ ದುರ್ಲಭವಾಗಿದೆ. ಈ ಸುಭಾಷಿತವನ್ನು ಹೊಸೆದ ಕಾಲ ಯಾವುದೋ ಗೊತ್ತಿಲ್ಲ, ಆದರೆ ಆಡಳಿತ ವ್ಯವಸ್ಥೆಯಲ್ಲಿ ಈ ಸ್ಥಿತಿಯು ಇವತ್ತಿಗೂ ಅಕ್ಷರಶಃ ಸತ್ಯವೆಂಬುದು ಮಾತ್ರ ಸ್ಪಷ್ಟ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.