7 ನೇ ದಿನವೂ ಮುಂದುವರಿದ ಸಾಗರಮಾಲಾ ಧರಣಿ; ಮಾರುಕಟ್ಟೆಯಲ್ಲಿ ಏರುತ್ತಿರುವ ಮೀನಿನ ದರ

ಕುಮಟಾ: ಸಾಗರಮಾಲಾ ಯೋಜನೆ ಕಾಮಗಾರಿಯ ವಿರುದ್ಧ ಸಿಡಿದೆದ್ದ ಮೀನುಗಾರರ ಧರಣಿ 7 ನೆಯ ದಿನಕ್ಕೆ ಕಾಲಿಟ್ಟಿದ್ದು, ಮಾರುಕಟ್ಟೆಯಲ್ಲಿ ಮೀನಿನ ಕೊರೆತೆ ಉಂಟಾದ ಪರಿಣಾಮ ಮೀನಿನ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಕೇಂದ್ರ ಸರ್ಕಾರವು ಕಾರವಾರದ ಟ್ಯಾಗೋರ್ ಕಡಲು ತೀರವನ್ನು ವಾಣಿಜ್ಯ ಬಂದರಾಗಿ ವಿಸ್ತರಣೆ ಮಾಡುವುದನ್ನು ವಿರೋಧಿಸಿ ಮೀನುಗಾರರು ಕಾರವಾರದಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆಯನ್ನು ಹಮ್ಮಿಕೊಂಡು, ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದರು. ಇದರಿಂದ ಕುಮಟಾ ಸೇರಿದಂತೆ ಮತ್ತಿತರರ ಮೀನುಮಾರುಕಟ್ಟೆಯಲ್ಲಿಯೂ ಮೀನು ಇಲ್ಲದಂತಾಗಿ, ದರವೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದರಿಂದ ಮೀನು ಪ್ರೀಯರು ಪರ್ಯಾಯವಾಗಿ ಚಿಕನ್ ಕೊಂಡೊಯ್ಯುತ್ತಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡ ನಂತರ, ಕುಮಟಾ ಮೀನು ಮಾರುಕಟ್ಟೆಯಲ್ಲಿ ಸೌಂದಾಳೆ ಮೀನಿನ ದರ ಪ್ರತಿ ಕೆ.ಜಿಗೆ 500 ರೂ, ಶೆಟ್ಲಿ ಮೀನಿಗೆ 600 ಹಾಗೂ ತೋರಿ ಮೀನಿಗೆ 5 ಕ್ಕೆ 100 ರೂ.ಗಳಂತೆ ಮಾರಾಟವಾಗುತ್ತಿದ್ದು, ಅತಿ ಹೆಚ್ಚು ಬಳಕೆ ಮಾಡುವ ಬಂಗಡೆ ಮೀನು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಂತಾಗಿದೆ. ಇದರಿಂದ ಮೀನಿನ ದರವನ್ನು ಹೋಲಿಕೆ ಮಾಡಿದರೆ ಚಿಕನ್ ದರ ತುಸು ಕಡಿಮೆಯೆಂದು ಗ್ರಾಹಕರು ಚಿಕನ್ ಅಂಗಡಿಗಳಿಗೆ ತೆರಳಿ ಖರೀದಿಯಲ್ಲಿ ತೊಡಗಿದ್ದಾರೆ.

ಮೀನಿನ ಪೂರೈಕೆ ಸ್ಥಗಿತಗೊಂಡ ಕಾರಣ ದರದಲ್ಲಿ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು, ಮೀನು ಕೊಂಡುಕೊಳ್ಳುವ ಗ್ರಾಹಕರಿಗೆ ಇದು ಹೊರೆಯಾಗಿ ಪರಿಣಮಿಸಿದೆ. ಮೀನಿನ ದರ ಹೊಲಿಕೆ ಮಾಡಿದರೆ ಚಿಕನ್ ದರ ತುಸು ಕಡಿಮೆಯಿದ್ದ ಕಾರಣ ಗ್ರಾಹಕರು ಚಿಕನ್ ಖರೀದಿಯಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ಚಿಕನ್ ವ್ಯಾಪಾರಿ ಸೌದಾಗರ.
ಚಿಕನ್ ದರ ಪ್ರತಿ ಕೆ.ಜಿ.ಗೆ 150 ರಿಂದ 170 ಇದ್ದು, ಮೀನಿನ ದರಕ್ಕೆ ಹೋಲಿಕೆ ಮಾಡಿದರೆ ಚಿಕನ್ ದರ ಕಡಿಮೆಯಿದೆ. ಇದರಿಂದ ಮೀನಿನ ಪರ್ಯಾಯವಾಗಿ ಚಿಕನ್ ತಿನ್ನುವಂತಾಗಿದೆ. – ರಾಘವೇಂದ್ರ ಶೇಟ್ {ಗ್ರಾಹಕ}

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.