ಶಾಂತಿಯುತವಾಗಿ ನಡೆದ ಸರ್ವೋದಯ ಭೂ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ

ಸಿದ್ದಾಪುರ: ಸ್ಥಳೀಯ ಸರ್ವೋದಯ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ರವಿವಾರ ನಡೆದಿದೆ.

ದೊಡ್ಮನೆ-ಕ್ಯಾದಗಿ ಕ್ಷೇತ್ರದಿಂದ ಎಂ.ಆರ್.ಹೆಗಡೆ ನೈಗಾರ, ಬೇಡ್ಕಣಿ ಕ್ಷೇತ್ರದಿಂದ ಎಂ.ಐ.ನಾಯ್ಕ, ಕಾನಗೋಡ ಕ್ಷೇತ್ರದಿಂದ ಎಚ್.ಕೆ.ಶಿವಾನಂದ, ಕಾನಸೂರು-ನಾಣಿಕಟ್ಟಾ ಕ್ಷೇತ್ರದಿಂದ ಶಂಕರ ಭಟ್ಟ ಗಿರಿಗಡ್ಡೆ, ಹಲಗೇರಿ ಕೇತ್ರದಿಂದ ಕೆ.ಕೆ.ನಾಯ್ಕ ಸುಂಕತ್ತಿ, ಸಾಲಗಾರರಲ್ಲದ ಕ್ಷೇತ್ರದಿಂದ ಸರೋಜ ಶಂಕರಮೂರ್ತಿ, ಪಪಂ ಕ್ಷೇತ್ರದಿಂದ ಶಾರದಾ ಮೋಹನ ನಾಯ್ಕ, ಇಟಗಿ-ವಾಜಗೋಡ ಕ್ಷೇತ್ರದಿಂದ ರಮಾನಂದ ಹೆಗಡೆ ಮಳಗುಳಿ, ಕೋಲಸಿರ್ಸಿ ಕ್ಷೇತ್ರದಿಂದ ಎಚ್.ಕೆ.ನಾಯ್ಕ, ಹೇರೂರು ಕ್ಷೇತ್ರದಿಂದ ಕಲಾ ಹೆಗಡೆ, ಮನಮನೆ-ಹಸವಂತೆ ಕ್ಷೇತ್ರದಿಂದ ಮೈಲಪ್ಪ ನಾಯ್ಕ ಇವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಹಾರ್ಸಿಕಟ್ಟಾ-ಬಿದ್ರಕಾನ ಕೇತ್ರದಿಂದ ಎಸ್.ಎಂ.ಹೆಗಡೆ ಪೆಟೇಸರ,ಹೆಗ್ಗರಣಿ-ನಿಲ್ಕುಂದ ಕ್ಷೇತ್ರದಿಂದ ಚಂದ್ರಶೇಖರ ಭಟ್ಟ ಉಂಚಳ್ಳಿ ಹಾಗೂ ಕವಂಚೂರು ಕ್ಷೇತ್ರದಿಂದ ಶಕುಂತಲಾ ಸದಾನಂದ ಇವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಒಟ್ಟೂ 15ಕ್ಷೇತ್ರ ಇದ್ದು ಅದರಲ್ಲಿ 14ಕ್ಷೇತ್ರದಲ್ಲಿ ಮಾತ್ರ ಚುನಾವಣೆ ನಡೆದಿದೆ. ಸೋವಿನಕೊಪ್ಪ ಕ್ಷೇತ್ರದಲ್ಲಿ ಎಸ್‍ಟಿ ಮೀಸಲಾತಿ ಇದ್ದು ಇಲ್ಲಿ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದೇ ಇರುವುದರಿಂದ ಚುನಾವಣೆ ನಡೆದಿರುವುದಿಲ್ಲ.  ಚುನಾವಣಾಧಿಕಾರಿಯಾಗಿ ತಹಸೀಲ್ದಾರ ಮಂಜುಳಾ ಭಜಂತ್ರಿ ಕಾರ್ಯನಿರ್ವಹಿಸಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.