ರಾಜ್ಯ ಮಟ್ಟದ ಚುನಾವಣಾ ರಸಪ್ರಶ್ನೆ; ಮೂರೂರಿನ ಪ್ರಗತಿ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ

ಕುಮಟಾ: ಇತ್ತೀಚೆಗೆ ಬೆಂಗಳೂರಿನ ಚಂದನ ವಾಹಿನಿಯಲ್ಲಿ ನಡೆದ ರಾಜ್ಯ ಮಟ್ಟದ ಚುನಾವಣಾ ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳಾದ ಸೌಜ್ಞಾ ಹಾಗೂ ದೀಕ್ಷಾ ಭಾಗವಹಿಸಿ, ಉತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಮುಖ್ಯಾಧ್ಯಾಪಕ ವಿವೇಕ ಆಚಾರಿ ಹಾಗೂ ಮಾರ್ಗದರ್ಶಕ ಮನೋಹರ ಹರಿಕಂತ್ರ ಹರ್ಷ ವ್ಯಕ್ತಪಡಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.