ಯಾವತ್ತೂ ನನ್ನದೆಂಬ ಭಾವ ಬರಬಾರದು; ರಾಮಚಂದ್ರಾಪುರ ಶ್ರೀ


ಗೋಕರ್ಣ: ಯಾವಾಗಲೂ ನನ್ನದು ಎಂಬ ಭಾವ ಬರಬಾರದು ಎಲ್ಲವೂ ನಿನ್ನದು ಎಂಬುದು ಬರಬೇಕು ಎಂದು ಶ್ರೀರಾಮಚಂದ್ರಾಪುರ ಮಠದಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಗಿರಿನಗರ ಶ್ರೀರಾಮಾಶ್ರಮದ ಪುನರ್ವಸುಭವನದಲ್ಲಿ ಭಾನುವಾರ ನಡೆದಧಾರಾ-ರಾಮಾಯಣಕಾರಣ-ಸ್ಮರಣಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ನನ್ನ ನಿನ್ನ(ದೇವರ) ಮಧ್ಯೆ ಭೇದವಿಲ್ಲವಾಗಿಯೂಕೂಡ ಪ್ರಭು ನಾನು ನಿನ್ನವನುಎನ್ನುವಾಗತುಂಬ ಸಮರ್ಪಣಾ ಭಾವಇದೆ ಹೊರತು ನೀನು ನನ್ನವನುಎನ್ನುವಾಗ ನೀನು ನನ್ನವನು ಮಾತ್ರಎಂಬುದು ಬಂದಾಗಎಲ್ಲತಂಟೆ, ತಕರಾರುಗಳು ಶುರುವಾಗುತ್ತದೆ. ಸಮುದ್ರ ಮತ್ತು ಅಲೆ ಬೇರೆಯಾಗಿಕಂಡರೂ ಬೇರೆಅಲ್ಲ. ಆ ಅಲೆಯುಅದೇ ಸಮುದ್ರದಿಂದತನ್ನ ವಿಲಾಸವನ್ನುತೋರಿದೆಅದರಲ್ಲೇಒಂದಾಗಿದೆ. ಹಾಗೇ ನಾವು ಕೂಡರಾಮನು ಸಮುದ್ರವಾದರೆ ನಾವು ಎಲ್ಲ ಅಲೆಗಳು. ಅಲೆಯ ಮೂಲ ಸಮುದ್ರ ನಮ್ಮ ಮೂಲ ರಾಮಸಾಗರವಾಗಿದೆಎಂದು ಹೇಳಿದರು.

ರಾಮಾಯಣ ಇಲ್ಲದೇ ಭಾರತೀಯ ಸಂಸ್ಕøತಿಇಲ್ಲ. ಮೂಲ ವಾಲ್ಮೀಕಿಯವರರಾಮಾಯಣವುಎಲ್ಲಿಯೂ ಪಠ್ಯವಾಗಿಲ್ಲ. ಈಗಿನ ಪಠ್ಯಗಳಲ್ಲಿ ಅಲ್ಲಿಂದಇಲ್ಲಿಂದ ಸೇರಿ ತುಣುಕುಗಳ ರಾಮಾಯಣಗಳು ಸೇರಿವೆ. ನಮಗೆಲ್ಲಯಕ್ಷಗಾನ ಸೇರಿದಂತೆ ಮುಂತಾದ ಗ್ರಾಮ್ಯಕಲೆಗಳಿಂದ ನಮಗೆ ರಾಮಾಯಣಗಳು ತಿಳಿದು ಬಂದಿದೆ. ಇತ್ತೀಚೆಗೆ ಹೇಗೆ ಆಗಿದೆಎಂದರೆಮೂಲ ರಾಮಾಯಣವನ್ನು ಬಿಟ್ಟುರಾಮಾಯಣದ ಗ್ರಂಥ ರಚನೆ ಮಾಡಿ ನಿನ್ನಕಥೆ ಬೇರೆ ಮಾಡುಎಂಬಂತಾಗಿದೆ.

ಕೆಲವು ಗ್ರಂಥಗಳಲ್ಲಿ ತತ್ವ, ಪಾತ್ರಗಳಿಗೆ ಅಪಚಾರವಾಗಿದೆ. ಕೆಲವು ಕಡೆ ಸೊಗಸು,ಸಂದೇಶ ಬಂದಿರುವ ಸಾಧ್ಯತೆಯೂಇದೆ. ಮೂಲ ರಾಮಾಯಣಕ್ಕೆಯಾವ ವಿಷಯ ವಿರೋಧವಾಗಿದೆಯೋಅದನ್ನುಒಪ್ಪುವುದಕ್ಕೆ ಆಗುವುದಿಲ್ಲ.ಅಂತಹದ್ದನ್ನು ಕೈ ಬಿಡಬೇಕಾಗುತ್ತದೆ ಅದನ್ನು ಒಪ್ಪಲು ಸಾಧ್ಯವಿಲ್ಲ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ವಾಲ್ಮೀಕಿರಾಮಾಯಣವೂ ಅನಿವಾರ್ಯ ಪಠ್ಯವಾಗಿರಲಿದ್ದುಇದರಿಂದಇಡೀ ಸಂಸ್ಕೃತಿ ಜೀವನವೂಗೊತ್ತಾಗುತ್ತದೆಎಂದು ತಿಳಿಸಿದರು.ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯಉದ್ದೇಶಕ್ಕಾಗಿ ನಡೆಸಿದ ಧಾರಾರಾಮಾಯಣ ಪ್ರವಚನಕ್ಕೆ ಪ್ರಾಯೋಜಕರಾಗಿ, ಕಾರ್ಯಕರ್ತರಾಗಿದುಡಿದವರಕೊಡುಗೆಯನ್ನುನೆನಪಿಸಿಕೊಳ್ಳಬೇಕು, ಸಿಂಹಾವಲೋಕನ ಮಾಡಬೇಕುಎಂದು ಶಾಸ್ತ್ರವೂ ಹೇಳುತ್ತದೆ ಎಂದರು.

ಅಜ್ಞಾತರಾಮಾಯಣ ಎಂಬ ಪ್ರಶ್ನೋತ್ತರಕಾರ್ಯಕ್ರಮದಲ್ಲಿ ವಿದ್ವಾನ್‍ಜಗದೀಶ ಶರ್ಮಾ ಸಂಪ, ವಿದ್ವಾನ್ ಪಾದೇಕಲ್ಲು ವಿಷ್ಣುಭಟ್, ವಿದ್ವಾನ್‍ರಾಘವೇಂದ್ರ ಭಟ್‍ಕ್ಯಾದಗಿ, ಮೋಹನ ಭಾಸ್ಕರ ಹೆಗಡೆ ಭಾಗಿಯಾಗಿ ಕೇಳಿದ ರಾಮಾಯಣದ ಬಗೆಗಿನ ಪ್ರಶ್ನೆಗಳಿಗೆ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರುಅದಕ್ಕೆ ಉತ್ತರಿಸಿದರು.ಸ್ಮರಣ ಕಾರ್ಯಕ್ರಮದಲ್ಲಿಧಾರಾರಾಮಾಯಣ ಪ್ರವಚನ ಆಲಿಸಿದ ರಾಘವೇಂದ್ರ ಭಟ್‍ಕ್ಯಾದಗಿ, ಶಾರದಾಜಯಗೋವಿಂದ, ರಮ್ಯಾ, ನೀರ್ನಳ್ಳಿಗಣಪತಿ ಭಟ್, ಗೋವಿಂದರಾಜ್‍ಕೋರಿಕ್ಕಾರ್‍ತಮ್ಮಅನುಭವ ಕಥನವನ್ನು ಹೇಳಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.