KMF ಕಲ್ಯಾಣ ಸಂಘದಿಂದ ರಾಮಚಂದ್ರಗೆ ಸಹಾಯ ಧನ ಚೆಕ್‍


ಶಿರಸಿ: ತಾಲೂಕಿನ ಉಮ್ಮಚಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ರಾಮಚಂದ್ರ ನಾಗೇಂದ್ರ ಹೆಗಡೆ ರವರಿಗೆ ಅಂಗೈ ಊಣವಾದ ಕಾರಣ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದಿಂದ ರೂ.25000/-ಗಳ ಸಹಾಯ ಧನದ ಚೆಕ್‍ನ್ನು ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಶಂಕರ ಹೆಗಡೆ ಇವರು ವಿತರಿಸಿದರು.

ಈ ಸಂದರ್ಭದಲ್ಲಿ ಸುರೇಶ್ಚಂದ್ರ ಹೆಗಡೆಯವರು ಮಾತನಾಡಿ ಕಲ್ಯಾಣ ಸಂಘದ ಸದಸ್ಯತ್ವ ಹೊಂದುವದರಿಂದ ಹಲವು ಅನುಕೂಲಗಳಿವೆ ಆದರೆ ಒಕ್ಕೂಟದ ವ್ಯಾಪ್ತಿಗೆ ಬರುವ ನಾಲ್ಕು ಜಿಲ್ಲೆಗಳಲ್ಲಿ ಕಲ್ಯಾಣ ಸಂಘದ ಸದಸ್ಯತ್ವವು ನಮ್ಮ ಜಿಲ್ಲೆಯಲ್ಲಿಯೇ ಕಡಿಮೆ ಇದ್ದು, ಎಲ್ಲ ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳು ಎಲ್ಲ ಹಾಲು ಉತ್ಪಾದಕ ಸದಸ್ಯರನ್ನು ಕಲ್ಯಾಣ ಸಂಘದ ಸದಸ್ಯರನ್ನಾಗಿಸಲು ಕ್ರಮವಿಡುವ ಮೂಲಕ ಇದರ ಸದುಪಯೋಗವನ್ನು ಎಲ್ಲ ಸದಸ್ಯರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ನಾಗೇಂದ್ರ ಹೆಗಡೆ, ಕಾರ್ಯದರ್ಶಿಯವರಾದ ಗಣಪತಿ ಪಟಗಾರ, ಒಕ್ಕೂಟದ ಅಧಿಕಾರಿಗಳಾದ ಎಸ್.ಎಸ್.ಬಿಜ್ಜೂರ್ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು, ಸಂಘದ ಹಾಲು ಉತ್ಪಾದಕರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.