ಲಾರಿ-ಬೈಕ್ ಡಿಕ್ಕಿ; ಸವಾರನಿಗೆ ಗಂಭೀರ ಗಾಯ


ಮುಂಡಗೋಡ: ಟಿವಿಎಸ್ ಮೊಪೆಡ್ ಸವಾರನಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಹುಬ್ಬಳ್ಳಿ- ಶಿರಶಿ ರಸ್ತೆಯಲ್ಲಿರುವ ಸಾಲಗಾಂವ ಗ್ರಾಮದ ಬಾಣಂತಿದೇವಿ ಕೆರೆಯ ಹತ್ತಿರ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಗಣೇಶ ಪುರದ ಕೃಷ್ಣಾ ಭೋವಿವಡ್ಡರ ಎಂದು ತಿಳಿದು ಬಂದಿದೆ. ಈತನು ಪಟ್ಟಣದಿಂದ ಶಿರಸಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಶಿರಸಿ ಕಡೆಯಿಂದ ಬರುತ್ತಿದ್ದ ಲಾರಿ ಚಾಲಕ ಅತಿ ವೇಗವಾಗಿ ಬಂದು ಈತನಿಗೆ ಡಿಕ್ಕಿ ಹೊಡೆದ ಪರಿಣಾಮ ಕೈ, ಕಾಲು ಮತ್ತು ತಲೆಗೆ ಬಲವಾದ ಏಟು ಬಿದ್ದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಈತನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‍ಆಸ್ಪತ್ರೆಗೆ ದಾಖಲಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.