ಪ್ರವಾಸಿ ಕುಟುಂಬ- ಹುನಗುಂದ ಗ್ರಾಮಸ್ಥರ ನಡುವೆ ಗಲಾಟೆ; ಸ್ಥಳಕ್ಕಾಗಮಿಸಿದ ಪೊಲೀಸರು

ಮುಂಡಗೋಡ: ತಾಲೂಕಿನ ಅತ್ತಿವೇರಿಯ ಪಕ್ಷಿಧಾಮದಲ್ಲಿ ಹುಬ್ಬಳ್ಳಿ ಕುಟುಂಬ ಹಾಗೂ ಹುನಗುಂದ ಗ್ರಾಮಸ್ಥರ ನಡುವೆ ಗಲಾಟೆ ನಡೆದ ಘಟನೆ ಇಂದು ನಡೆದಿದೆ.

ಹುಬ್ಬಳ್ಳಿಯಿಂದ ಅತ್ತಿವೇರಿ ಪಕ್ಷಿಧಾಮಕ್ಕೆ ಬಂದಿದ್ದ ಕುಟುಂಬ ಹಾಗೂ ಸ್ಥಳೀಯ ಹುನುಗುಂದ ಗ್ರಾಮದ ಯುವಕನ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು, ಯಾವ ಕಾರಣಕ್ಕೆ ಜಗಳ ನಡೆದಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗದಿದ್ದರೂ ಪರಸ್ಪರ ಬೈದಾಡಿಕೊಳ್ಳುತ್ತಿರುವರ ಸಂಖ್ಯೆ ಹೆಚ್ಚಾಗಿ ಕಂಡು ಬಂತು ಬೈದಾಡಿಕೊಳುತ್ತಾ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಜಗಳವನ್ನು ಒಂದು ಗಂಟೆ ಜನರನ್ನು ಹತೋಟಿಗೆ ತರಲು ಅತ್ತಿವೇರಿ ಪಕ್ಷಿಧಾಮದ ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಮಕರ ಸಂಕ್ರಮಣಕ್ಕೆ ಬೇರೆ ಬೇರೆ ಊರುಗಳಿಂದ ಪಕ್ಷಿಧಾಮಕ್ಕೆ ಬಂದಿದ್ದ ಜನರು ಇದರಿಂದ ಭಯಗೊಂಡಿದ್ದರು. ಯುವಕರಿಬ್ಬರ ಜಗಳ ಇಡಿ ಪಕ್ಷಿಧಾಮದಲ್ಲಿ ಆತಂಕ ಉಂಟು ಮಾಡಿತ್ತು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರನ್ನು ವಶಕ್ಕೆ ತೆಗೆದುಕೊಂಡರು ಎನ್ನಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.