ನಾಟ್ಯ ಆನಂದದ ಪ್ರತೀಕ, ಅವನೇ ಎಲ್ಲರ ಮನಸ್ಸಿಗೆ ಸಂತೋಷ ಕೊಡುತ್ತಾನೆ; ರಾಮಚಂದ್ರಾಪುರ ಶ್ರೀ

ಸಿದ್ದಾಪುರ: ನಾಟ್ಯ ಮನಸ್ಸಿಗೆ ಆನಂದ ಕೊಡುತ್ತದೆ. ನಾಟ್ಯ ವಿನಾಯಕ ಎಲ್ಲರ ಬದುಕಿಗೆ ಆನಂದ ಕೊಡುವವನು. ಆನಂದ ಕೊಡುವವನೇ ದೊಡ್ಡವನು. ಆದ್ದರಿಂದ ಅವನೇ ಶ್ರೇಷ್ಠ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳು ನುಡಿದರು.

ಗುರುವಾರ ಅವರು ತಾಲೂಕಿನ ಇಟಗಿ ಕಲಗದ್ದೆ ಶ್ರೀಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಂಡ ನಾಲ್ಕು ದಿನಗಳ ಮಹಾಗಣಪತಿ ಯೋಗ ಪಟ್ಟಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನುಡಿದರು. ಆನಂದ ಸಮುದ್ರ ಆದವನೇ ಗಣಪತಿ. ನಾಟ್ಯ ಆನಂದದ ಪ್ರತೀಕ. ಗಣಪತಿಯೆ ಇಲ್ಲಿ ನೃತ್ಯ ಮಾಡುತ್ತಿದ್ದಾನೆ. ಮೋದಕ ಪ್ರಿಯನು ಮೋದಕ ಇಟ್ಟುಕೊಂಡಿದ್ದು ಅನಂದದ ಮೋದ ಅದು. ಭಗವಂತ ನಮಗೆ ಸಂತೋಷ ಕೊಡಲು ಅದರಲ್ಲೂ ನಾಟ್ಯ ಭಂಗಿಯಲ್ಲಿ ನಿಂತಿದ್ದಾನೆ ಎಂದರು.

ನಿಜವಾಗಿ ಆನಂದ ಕೊಡುವವನೇ ದೊಡ್ಡವರು. ಹಣ, ವಯಸ್ಸು, ಅಧಿಕಾರ ಯಾವುದೋ ದೊಡ್ಡದು ಅಲ್ಲ. ಆದರೆ, ಪ್ರತಿ ಜೀವಿಯೂ ಅನಂದಾನ್ವೇಷಿಯಾಗಿದೆ. .ಮಹಾಯೋಗ ಪಟ್ಟಾಭಿಷೇಕ ಕೂಡ ಯೋಜನೆಯಾಗಿದೆ. ಎಷ್ಟೋ ಸಂಸ್ಥೆ, ಸಂಘಟನೆ ಒಂದು ವ್ಯಕ್ತಿ ಮಾಡಿದಷ್ಟೂ ಮಾಡುವದಿಲ್ಲ. ಒಂದು ವ್ಯಕ್ತಿಯೇ ಸಂಸ್ಥೆಯ ರೀತಿ ಕೆಲಸ ಮಾಡುತ್ತಿದೆ. ಒಂದೇ ವ್ಯಕ್ತಿ ಎಲ್ಲ ಮಾಡುವದು ಕೂಡ ಸುಲಭವಲ್ಲ ಎಂದರು. ವಿನಾಯಕನ ಸನ್ನಿಧಿ ಎಂದರೆ ಸಮಾಧಾನ, ನೆಮ್ಮದಿ ಕೊಡುತ್ತದೆ. ಇಲ್ಲಿ ಎಲ್ಲ ಜೀವಿಗಳಿಗಳು ಆನಂದ ಇಲ್ಲಿ ಪ್ರಸಾದ ಪುಷ್ಪದಲ್ಲಿ ಸಿಗಲಿ ಎಂದರು. ಹೂವಿನಲ್ಲಿ ಸಿಗಲಿ ಎಂದ ಶ್ರೀಗಳು, ದೇವಸ್ಥಾನ ಕಟ್ಟುವದು ಸುಲಭವಲ್ಲ. ಮಠ, ಆಯತನ ನಿರ್ಮಾಣ ಮಾಡುವದು ಗೊತ್ತು. ವ್ಯಕ್ತಿ ಮಾಡುವದು ಸಣ್ಣ ಕಾರ್ಯ ಅಲ್ಲ. ಅದೊಂದು ಪುಣ್ಯ .ಯಾವ ಗುರುವಿಗೂ ಈ ಕಾರ್ಯ ಸಂತೋಷ ಕೊಡುತ್ತದೆ. ಮನುಷ್ಯನಿಗೆ ಸಾಧನೆ ಮಾಡುವ ಉತ್ಸಾಹ ಗುಣ ಬೇಕು. ಉತ್ಸಾಹ ಇದ್ದವರಿಗೆ ಅಸಾಧ್ಯವಾಗುವದಿಲ್ಲ ಎಂದರು.

ವಿ. ಉಮಾಕಾಂತ ಭಟ್ಟ ಕೆರೇಕೈ, ಸಂಸ್ಥಾನ ಇರದೇ ಇದ್ದರೆ ಯಾವುದಕ್ಕೂ ಅರ್ಥವಿಲ್ಲ. ಯೋಗ ಪಟ್ಟಾಭಿಷೇಕ ಅಪರೂಪದ್ದು. ಆದರೆ, ಇಂದು ಎಲ್ಲಡೆ ಭೋಗ ಪಟ್ಟ ಬಯಸುವ ಹೊತ್ತಿನಲ್ಲಿ ಇಲ್ಲಿ ಯೋಗ ಪಟ್ಟ ನಡೆಯುತ್ತಿದೆ. ಇಲ್ಲಿ ಭಕ್ತ ಕೇಳಿದ್ದಕ್ಕೆ ಪ್ರಸಾದ ಆಗುತ್ತಿದೆ. ಇದುಶಕ್ತಿಯ ಕೇಂದ್ರ, ಭಕ್ತಿಯ ಕೇಂದ್ರ ಎಂದರು. ಪ್ರಸಿದ್ಧ ಜೋತಿಷಿ ಮೋಹನಕುಮಾರ ಜೈನ, ಯೋಗ ಪಟ್ಟಾಭಿಷೇಕ ಮಹಾ ಯೋಗದ ಕಾರಣ. ಇದೊಂದು ಇತಿಹಾಸದ ಪುಟ ಸೇರಿದೆ ಎಂದರು.

ಸಿಗಂಧೂರೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ಟ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಸೆಲ್ಕೋ ಸೋಲಾರ ಅಧಿಕಾರಿ ದತ್ತಾತ್ರಯ ಭಟ್ಟ, ಸೊಸೈಟಿ ಅಧಿಕಾರಿ ರಮೇಶ ಹೆಗಡೆ ಕೊಡ್ತಗಣಿ, ಆಗಮ ಪಂಡಿತ ಷಡಕ್ಷರಿ ಕೃಷ್ಣ ಭಟ್ಟ, ಯೋಗ ಪಟ್ಟಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಬೆಂಗಳೂರಿನ ಎನ್.ಆರ್.ಭಟ್ಟ ಇಟಗಿ, ಪುರೋಹಿತ ಅಡವಿತೋಟ ಕೃಷ್ಣ ಭಟ್ಟ, ವಿದ್ವಾನ್ ಮಹೇಶ ಭಟ್ಟ ಅಗ್ಗೇರೆ ಇತರರು ಇದ್ದರು.

ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ ಪ್ರಸ್ತಾಪವಿಕ ಮಾತನಾಡಿದರು. ಸಾಂಸ್ಕೃತಿಕ ಸಮಿತಿ ಪ್ರಮುಖ ನಿತಿನ್ ಕಲಗದ್ದೆ ನಿರ್ವಹಿಸಿದರು.

ಯೋಗ ಪಟ್ಟಾಭಿಷೇಕ ಮಹೋತ್ಸವ ಜ.19ರಂದು ನಡೆಯಲಿದೆ. ಧಾರ್ಮಿಕ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. – ವಿನಾಯಕ ಹೆಗಡೆ ಕಲಗದ್ದೆ, ಮೊಕ್ತೇಸರ

Categories: ಜಿಲ್ಲಾ ಸುದ್ದಿ

Leave A Reply

Your email address will not be published.