ಜ.18 ಕ್ಕೆ ಧಾರಾನಾಥ ದೇವಾಲಯದ ಮಹಾರಥೋತ್ಸವ

ಕುಮಟಾ: ತಾಲೂಕಿನ ಧಾರೇಶ್ವರದ ಮ್ಹಾತೋಬಾರ ಧಾರಾನಾಥ ದೇವಾಲಯದ ಮಹಾರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜ. 18 ರಂದು ಶನಿವಾರ ವಿಜೃಂಭಣೆಯಿಂದ ಜರುಗಲಿದೆ.

ಜ.17 ರಂದು ಬೆಳಿಗ್ಗೆ ಕಲಶ ಸ್ಥಾಪನೆ, ಅಧಿವಾಸ ಹವನಾದಿಗಳು, ರಾತ್ರಿ ಕ್ಷೇತ್ರಪಾಲ ಬಲಿ, ವೃಷಭ ಯಂತ್ರೋತ್ಸವ, ಪುಷ್ಪ ರಥೋತ್ಸವ ನಡೆಯಲಿದ್ದು, ಜ. 18 ರಂದು ಬೆಳಿಗ್ಗೆ ಕಲಶಸ್ಥಾಪನೆ, ಅಧಿವಾಸ ಹವನಾದಿಗಳು, ರಥಾದಿವಾಸ ಹವನ, ಪೂರ್ವಾಹ್ನ ದೇವರ ರಥಾರೋಹಣ, ಸಂಜೆ ಧಾರಾನಾಥ ದೇವರ ಮಹಾರಥೋತ್ಸವ, ರಾತ್ರಿ ಮೃಗಬೇಟೆ, ಭೂತಬಲಿ, ಶಯನೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.

ಜ.19 ರಂದು ಬೆಳಿಗ್ಗೆ ಪ್ರಭೋದೋತ್ಸವ ಪೂಜೆ, ಕಲಶಸ್ಥಾಪನೆ, ಅಧಿವಾಸ ಹವನಾದಿಗಳು, ರಾತ್ರಿ ಓಕುಳಿ, ಅವಭೃತ ತೀರ್ಥಸ್ನಾನ ಸೇರಿದಂತೆ ಉತ್ಸವಾದಿಗಳು ಮುಕ್ತಾಯಗೊಳ್ಳಲಿದೆ. ಜ.20 ರಂದು ಬೆಳಿಗ್ಗೆ ಶ್ರೀಗಣಹವನ, ಸಂಪ್ರೋಕ್ಷಿಣ್ಯ, ಸಂಜೆ ಪಂಚಖಾದ್ಯ ಪೂಜೆ ನಡೆಯಲಿದೆ. ಈ ಎಲ್ಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಧಾರಾನಾಥ ದೇವಾಲಯದ ಕಾರ್ಯಕಾರಿ, ಪೂಜಾ ಸೇವಾ ಸಮಿತಿ ಮತ್ತು ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.