ಅದ್ದೂರಿ ಬಾಣಂತಿ ದೇವಿ ಜಾತ್ರಾ ಮಹೋತ್ಸವ; ತೆಪ್ಪದಲ್ಲಿ ಹರಕೆಯ ಮಗು


ಮುಂಡಗೋಡ: ತಾಲೂಕಿನ ಸಾಲಗಾಂವ ಗ್ರಾಮದ ಬಾಣಂತಿ ದೇವಿಯ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವು ಮಕರಸಂಕ್ರಮಣ ದಿನದಂದು ಜರುಗುವ ಈ ಜಾತ್ರೆ ಬುಧವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ನಡೆಯುವ ಮೊದಲ ಜಾತ್ರೆ ಇದಾಗಿದ್ದು ಜಾತ್ರೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ಹಾಗೂ ತಾಲೂಕುಗಳಿಂದ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು. ಪಟ್ಟಣದ ಹುಬ್ಬಳ್ಳಿ-ಶಿರಸಿ ರಸ್ತೆಯ ಸಾಲಗಾಂವ ಗ್ರಾಮದ ಕೆರೆಯ ದಂಡೆಯ ಮೇಲೆ ವಿರಾಜಮಾನವಾಗಿರುವ ಬಾಣಂತಿ ದೇವಿಯ ಜಾತ್ರಾ ಮಹೋತ್ಸವವು ತಾಲೂಕಿನಲ್ಲಿ ಪ್ರತಿ ವರ್ಷ ಜರುಗುವ ಜಾತ್ರೆಗಳಲ್ಲಿ ಒಂದು ದೊಡ್ಡ ಜಾತ್ರೆಯಾಗಿದೆ.

ವರ್ಷದಿಂದ ವರ್ಷಕ್ಕೆ ಜನ ಸಾಗರವೇ ಇಲ್ಲಿ ಹರಿದು ಬರುತ್ತಿದೆ. ವಿಶೇಷವಾಗಿ ಮಕ್ಕಳಿಲ್ಲವೆಂದು ಈ ಬಾಣಂತಿದೇವಿಗೆ ಹರಕೆ ಹೊತ್ತಿರುತ್ತಾರೆ. ಹರಕೆ ನೆರವೇರಿ ಮಕ್ಕಳಾದ ಕೆಲವು ಮಹಿಳೆಯರು ಮಕ್ಕಳನ್ನು ಕೆರೆಯಲ್ಲಿ ಸ್ನಾನ ಮಾಡಿಸಿದರೆ ಇನ್ನು ಕೆಲವರು ತೆಪ್ಪದಲ್ಲಿ ತೇಲಿಸಿ ತೆಗೆದರು. ಮೆರವಣಿಗೆ ನಂತರ ತೆಪ್ಪವನ್ನು ಬಿಡುವಾಗ ನೆರೆದ ಜನ ಸಮೂಹ ತೆಪ್ಪಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಸಂಭ್ರಮಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.