ಸ್ವರ್ಣವಲ್ಲೀಯಲ್ಲಿ ಜ.17 ಕ್ಕೆ ಹೊಸ್ತೋಟ ಭಾಗವತರ ಸಂಸ್ಮರಣೆ

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮತ್ತು ಯಕ್ಷಶಾಲ್ಮಲಾ ಮಠದೇವಳ, ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ದಿ.ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣೆ ಕಾರ್ಯಕ್ರಮವನ್ನು, ಸ್ವರ್ಣವಲ್ಲೀ ಸುಧರ್ಮ ಸಭಾಭವನದಲ್ಲಿ ಜ. 17 ಶುಕ್ರವಾರ ಸಂಜೆ 3.30 ಗಂಟೆಗೆ ಆಯೋಜಿಸಿದೆ.

ಪ.ಪೂ.ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ಚಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನ ಭಾಗವತ ಕೃಷ್ಣ ಭಾಗವತರು ಬಾಳೇಹದ್ದ, ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ, ಮಾತೃಮಂಡಳಿ ಅಧ್ಯಕ್ಷೆ ವೇದಾ ಸೀತಾರಾಮ ಹೆಗಡೆ, ನೀರ್ನಳ್ಳಿ, ಅಭ್ಯಾಗತರಾಗಿ ಕೃಷಿ ತಜ್ಞ ಕೆ.ಎಂ.ಹೆಗಡೆ, ಭೈರುಂಬೆ, ಯಕ್ಷಗಾನ ಅಕಾಡೆಮಿ, ಬೆಂಗಳೂರು ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ದಂಟಕಲ್, ಸಂಗೀತ ನಾಟಕ ಅಕಾಡೆಮಿ, ನವದೆಹಲಿ ಸದಸ್ಯ ಶಿವಾನಂದ ಹೆಗಡೆ ಕೆರೆಮನೆ, ಚಲನಚಿತ್ರ ಕಲಾವಿದ ರಾಮಕೃಷ್ಣ ಹೆಗಡೆ ನೀರ್ನಳ್ಳಿ, ಯಕ್ಷಗಾನ ಕಲಾರಂಗ, ಉಡುಪಿ ಕಾರ್ಯದರ್ಶಿ ಮುರಳಿ ಕಡೆಕಾರು, ಪ್ರಗತಿಪರ ಕೃಷಿಕ ಸೀತಾರಾಮ ಹೆಗಡೆ ನೀರ್ನಳ್ಳಿ ಉಪಸ್ಥಿತರಿರುವರು. ಯಕ್ಷಶಾಲ್ಮಲಾ ಅಧ್ಯಕ್ಷ ಆರ್.ಎಸ್.ಹೆಗಡೆ, ಭೈರುಂಬೆ ಅಧ್ಯಕ್ಷತೆ ವಹಿಸುವರು.

ಪ್ರಮುಖರಾದ ಡಾ.ರಾಮಕೃಷ್ಣ ಜೋಶಿ ಮೈಸೂರು, ಡಾ.ವಿಜಯನಳಿನಿ ರಮೇಶ, ಶಿರಸಿ, ಅರ್ಥಧಾರಿ ವಿ. ಉಮಾಕಾಂತ ಭಟ್ ಕೆರೆಕೈ, ಗೋಪಾಲಕೃಷ್ಣ ಭಾಗವತ ಕಡತೋಕ, ಎಂ.ಎನ್.ಹೆಗಡೆ ಹಳವಳ್ಳಿ, ಕೆ.ವಿ.ಹೆಗಡೆ ಕವಲಕ್ಕಿ, ರಂಗಣ್ಣ ಬೆಳೆಯೂರು, ಪರಮೇಶ್ವರ ಭಟ್ ಮೋತಿಗುಡ್ಡ ಈ ಸಂದರ್ಭದಲ್ಲಿ ನುಡಿನಮನ ಸಲ್ಲಿಸುವರು.

ಭಾಗವತರಾದ ಕೆ.ಜಿ.ರಾಮರಾವ್ ಪುರಪ್ಪೇಮನೆ, ತಿಮ್ಮಪ್ಪ ಹೆಗಡೆ ಬಾಳೇಹದ್ದ, ಕೇಶವ ಹೆಗಡೆ ಕೊಳಗಿ, ಗಣಪತಿ ಭಟ್ ಬರ್ತೋಟ, ಗೋಪಾಲಕೃಷ್ಣ ಭಟ್ ಜೋಗಿಮನೆ, ಪರಮೇಶ್ವರ ಹೆಗಡೆ ಐನಬೈಲ್, ಸತೀಶ ಹೆಗಡೆ ದಂಟಕಲ್, ಅನಂತ ಹೆಗಡೆ ದಂತಳಿಕೆ, ಕೃಷ್ಣ ಹೆಬ್ಬಾರ್ ಅಚ್ವೆ, ರವೀಂದ್ರ ಭಟ್ ಅಚ್ವೆ, ಗಜಾನನ ಭಟ್ ತುಳಗೇರಿ, ಶ್ರೀಧರ ಹೆಗಡೆ ಹಣಗಾರು ಮದ್ದಲೆ ವಾದಕರಾಗಿ ಶಂಕರ ಭಾಗವತ, ಯಲ್ಲಾಪುರ, ಗಣಪತಿ ಭಾಗವತ, ಕವ್ವಾಳೆ, ನರಸಿಂಹ ಭಟ್ ಹಂಡ್ರಮನೆ, ಶ್ರೀಪಾದ ಭಟ್ ಮೂಡಗಾರು, ಶ್ರೀಪತಿ ಹೆಗಡೆ ಕಂಚಿಮನೆ. ಚಂಡೆ ವಾದಕರಾಗಿ ಕೃಷ್ಣ ಯಾಜಿ ಇಡಗುಂಜಿ, ಗಣೇಶ ಗಾಂವಕರ, ಕನಕನಹಳ್ಳಿ, ವಿಘ್ನೇಶ್ವರ ಕೆಸರಕೊಪ್ಪ, ಪ್ರಸನ್ನ ಹೆಗ್ಗಾರ ಇವರಿಂದ ಗಾನ ನಮನ ನಡೆಯಲಿದೆ. ಗಣಪತಿ ಹೆಗಡೆ ನೀರ್ನಳ್ಳಿ, ಸತೀಶ ಯಲ್ಲಾಪುರ, ಜಿ.ಎ.ಬೊಮ್ನಳ್ಳಿ, ಶಾಂತಾರಾಮ ಹೆಗಡೆ ಕುಂಬ್ರಿಗದ್ದೆ ಚಿತ್ರ ನಮನ ಸಲ್ಲಿಸಲಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.