ಸಿಹಿಯಾದ ಗೆಣಸಿನ ಬರ್ಫಿ ಮಾಡಿ ಸಂಕ್ರಾಂತಿ ಸಂಭ್ರಮ ಆಚರಿಸಿ


ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಗೆಣಸು ಅರ್ಧ ಕೆ.ಜಿ, ಬೆಲ್ಲ 100-200 ಗ್ರಾಂ, ತುಪ್ಪ 100 ಗ್ರಾಂ. ಏಲಕ್ಕಿ ಪುಡಿ.

ಮಾಡುವ ವಿಧಾನ: ಗೆಣಸನ್ನು ಬೇಯಿಸಿ ಸಿಪ್ಪೆ ತೆಗೆದು ತುರಿಯಿರಿ. 200ರಿಂದ 300 ಗ್ರಾಂ ಬೆಲ್ಲವನ್ನು ಸುಮಾರು ಅರ್ಧ ಲೋಟದಷ್ಟು ನೀರು ಹಾಕಿ ಚೆನ್ನಾಗಿ ನೊರೆ ಬರುವಂತೆ ಆದ ಮೇಲೆ ಸುಮಾರು 100 ಗ್ರಾಂ ತುಪ್ಪ, ತುರಿದ ಗೆಣಸು ಹಾಕಿ, ಬರ್ಫಿ ಹದ ಬರುವವರೆಗೆ ಹುರಿದು, ತುಪ್ಪ ಸವರಿದ ತಟ್ಟೆಗೆ ಹಾಕಿ ಹರಡಿ. ಗೋಡಂಬಿಯನ್ನು ಸಣ್ಣ ಚೂರುಗಳನ್ನಾಗಿ ಮಾಡಿ ತುಪ್ಪದಲ್ಲಿ ಹುರಿದು ಮೇಲೆ ಉದುರಿಸಿ ಒತ್ತಿದರೆ ಸಿಹಿಯಾದ ಗೆಣಸಿನ ಬರ್ಫಿ ಸವಿಯಲು ಸಿದ್ಧ. 4-6 ದಿನಗಳವರೆಗೆ ಇದು ಕೆಡದು.

Categories: ಅಡುಗೆ ಮನೆ

Leave A Reply

Your email address will not be published.