ಸಂಕ್ರಾಂತಿ ಆಚರಣೆಗೆ ಗೋಕರ್ಣಕ್ಕೆ ಹರಿದು ಬಂದ ಭಕ್ತ ಸಮೂಹ


ಗೋಕರ್ಣ: ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಜನ ಸಾಗರವೆ ಹರಿದು ಬಂದಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕದವರ ಆಗಮಿಸಿದ್ದರು ಇದರಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಜನರು ಆಗಮಿಸಿದ್ದು, ಮುಖ್ಯ ಕಡಲತೀರದಲ್ಲಿ ಸಮುದ್ರ ಸಾನ್ನ ( ಪುಣ್ಯ ಸ್ನಾನ ) ಮಾಡಿ ಪುನೀತರಾದರು. ನಂತರ ಮಹಾಗಣಪತಿ ದೇವಾಲಯದಲ್ಲಿ ದರ್ಶನ, ಮಹಾಬಲೇಶ್ವರ ದೇವಾಲಯದಲ್ಲಿ ಆತ್ಮಲಿಂಗ, ದರ್ಶನ, ಪೂಜೆ ನೆರವೇರಿಸಿದರು. ಅಪಾರ ಸಂಖ್ಯೆಯಲ್ಲಿ ಬಂದ ಭಕ್ತರಿಗೆ ದೇವಾಲಯದ ಆಡಳಿತ ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಿತ್ತು. ಮಹಾಬಲೇಶ್ವರ ದೇವಾಲಯದ ಅಮೃತಾನ್ನ ವಿಭಾಗದಲ್ಲಿ ಐದು ಸಾವಿರಕ್ಕೂ ಅಧಿಕ ಜನರು ಉಚಿತ ಪ್ರಸಾದ ಭೋಜನ ಸ್ವೀಕರಿಸಿದರು.

ಮಾಮೂಲಿನಂತೆ ಟ್ರಾಫಿಕ್ ಸಮಸ್ಯೆ: ಹಲವು ಬಾರಿ ಇಲ್ಲಿನ ಸ್ಥಳೀಯರು ದೇವಾಲಯದ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಬೇಕು ಎಂದು ಮನವಿ ಮಾಡಿದರು ಯಾವುದೇ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳದಿರುವುದರಿಂದ, ಯಾತ್ರಿಕರು ಅಧಿಕ ಸಂಖ್ಯೆಯಲ್ಲಿ ಬರುವ ದಿನಗಳಲ್ಲಿ ದೇವರ ದರ್ಶನಕ್ಕೆ ಹೋಗುವವರು ಸಂಚಾರ ದಟ್ಟಣೆಯಿಂದ ತೊಂದರೆ ಅನುಭವಿಸಬೇಕಾಗಿದ್ದು, ಬುಧವಾರ ಸಹ ಯಥಾಸ್ಥಿತಿ ಮುಂದುವರಿದಿದೆ. ಬೇರೆಡೆ ಬಂದೋವಸ್ತಿಗಾಗಿ ಅನೇಕ ಪೊಲೀಸರು ಸ್ಥಳೀಯ ಠಾಣೆಯಿಂದ ತೆರಳಿದ್ದು, ಇದ್ದ ಸಿಬ್ಬಂದಿಯೇ ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸ ಮಾಡುತ್ತಿರುವುದು ಕಂಡುಬಂತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.