ರಾಘವೇಶ್ವರ ಭಾರತಿ ಪ್ರೌಢಶಾಲೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ


ಗೋಕರ್ಣ: ಇಲ್ಲಿಯ ಪ್ರಸಿದ್ಧ ವಿದ್ಯಾಸಂಸ್ಥೆಯಾದ ಮೊಡರ್ನ ಎಜ್ಯುಕೇಶನ ಟ್ರಸ್ಟ್‍ನ ಶ್ರೀ ರಾಘವೇಶ್ವರ ಭಾರತಿ ಶಾಲೆಯಲ್ಲಿ ಸೋಮವಾರದಂದು ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ ಕುಮಟಾ ಇವರು ಈ ಶಾಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿದರು.

ವಿದ್ಯಾರ್ಥಿಗಳನ್ನು 5 ತಂಡವಾಗಿ ವಿಗಂಡಿಸಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಯಶಾಲಿಯಾದ ಮೊದಲ ತಂಡಕ್ಕೆ 500ರೂ ಪ್ರಥಮ ಬಹುಮಾನವಾಗಿ, ಎರಡನೇ ತಂಡಕ್ಕೆ 400ರೂ ದ್ವಿತೀಯ ಬಹುಮಾನವಾಗಿ, ಮೂರನೇ ತಂಡಕ್ಕೆ 300ರೂ ತೃತೀಯ ಬಹುಮಾನವನ್ನು ನೀಡಿದ್ದರು.

ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ನಿರೀಕ್ಷಕರು ಕುಮಟಾದವರಾದ ದಿನೇಶ ನಾಯ್ಕ, ತಾಲೂಕಾ ಆರೋಗ್ಯ ಶಿಕ್ಷಣ ಅಧಿಕಾರಿಗಳು ಕುಮಟಾದವರಾದ ಆರ್.ಜಿ.ನಾಯ್ಕ, ಮಹಾಂತೇಶ ಹುಗಾರ, ಪ್ರಾಥಮಿಕ ಆರೋಗ್ಯ ಸಿಬ್ಬಂದಿಗಳು, ಹಾಗೂ ಶಾಲಾ ಮುಖ್ಯಾಧ್ಯಾಪಕಿ ಉಷಾ ನಾಯಕ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.