ಜ.16 ಕ್ಕೆ ‘ಸಂಕ್ರಾಂತಿ ಸಂಗೀತೋತ್ಸವ’

ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಕ್ರಾಂತಿ ಉತ್ಸವದ ಪ್ರಯುಕ್ತ “ಸಂಕ್ರಾಂತಿ ಸಂಗೀತೋತ್ಸವ” ಜ.16 ರಂದು ರಾತ್ರಿ 11 ಕ್ಕೆ ನಡೆಯಲಿದೆ.

ಕಲಾವಿದರಾದ ಗುರುದತ್ತ ಕೃಷ್ಣಮೂರ್ತಿ ಕೋಲ್ಕತ್ತ, ವಾಣಿ ಹೆಗಡೆ, ಗಣಪತಿ ಹೆಗಡೆ, ಪ್ರಸನ್ನ ವೈದ್ಯ, ಅನುರಾಧಾ ಭಾಗ್ವತ್ ಗಾಯನ ಪ್ರಸ್ತುತಪಡಿಸುವರು. ಪ್ರಕಾಶ ಹೆಗಡೆ ಶಿರಸಿ, ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂ, ಹಾಗೂ ಗಣೇಶ್ ಗುಂಡ್ಕಲ್, ಎನ್.ಜಿ. ಹೆಗಡೆ, ಪ್ರದೀಪ ಕೋಟೆಮನೆ, ನಾಗೇಂದ್ರ ವೈದ್ಯ ತಬಲಾಸಾಥ್ ನೀಡಲಿದ್ದಾರೆಂದು ಸಂಘಟಕ ಗೋಪಾಲಕೃಷ್ಣ ಭಾಗ್ವತ್ ಗುಡ್ನಮನೆ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.