ಕುಮಟಾ ಸಾರಿಗೆ ಘಟಕದಲ್ಲಿ ವಿಜೃಂಭಣೆಯಿಂದ ನಡೆದ ಸತ್ಯನಾರಾಯಣ ಪೂಜೆ

ಕುಮಟಾ: ಮಕರ ಸಂಕ್ರಾಂತಿ ಹಾಗೂ ಸಾಯಿಬಾಬಾ ಸೇವಾ ಸಮಿತಿ ವತಿಯಿಂದ ಪಟ್ಟಣದ ಸಾರಿಗೆ ಘಟಕದದಲ್ಲಿ ಸೋಮವಾರ ಪ್ರತೀವರ್ಷದಂತೆ ಆಯೋಜಿಸಿದ ಸತ್ಯನಾರಾಯಣ ಪೂಜೆ, ಗಣಹೋಮ, ಸಾಯಿಬಾಬಾ ಪೂಜೆ ಮತ್ತು ಅನ್ನಸಂತರ್ಪಣಾ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಎಚ್.ಫಕೀರಪ್ಪ ಮಾತನಾಡಿ, ಉತ್ತರಕನ್ನಡ ವಿಭಾಗದ ಕುಮಟಾ ಘಟಕದ ವತಿಯಿಂದ ಕಳೆದ 30 ವರ್ಷಗಳಿಂದ ಸತ್ಯನಾರಾಯಣ ಪೂಜೆ, ಗಣಹೋಮ ಮತ್ತು ಸಾರ್ವಜನಿಕ ಅನ್ನಸಂತರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ 3 ವರ್ಷಗಳ ಹಿಂದೆ ಘಟಕದಲ್ಲಿ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪ್ರತಿವರ್ಷವೂ ವಿಜೃಂಭಣೆಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾರ್ಮಿಕ ವರ್ಗದವರು ಮತ್ತು ಅಧಿಕಾರಿಗಳು ಅತ್ಯಂತ ವಿಜೃಂಭಣೆಯಿಂದ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.

ಸಾರಿಗೆ ಘಟಕದ ಅಧಿಕಾರಿಗಳು, ಸಿಬ್ಬಂದಿಗಳ ಕುಟುಂಬಸ್ಥರು ಮತ್ತು ಸಾರ್ವಜನಿಕರು ಅನ್ನಸಂತರ್ಪಣೆಯಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸುವ ಮೂಲಕ ಸಾರಿಗೆ ಘಟಕದ ಸಿಬ್ಬಂದಿಗಳು ಆಯೋಜಿಸುವ ವಾರ್ಷಿಕ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.