ಯಲ್ಲಾಪುರದಲ್ಲಿ ಜ.15ಕ್ಕೆ ‘ನಕ್ಷತ್ರ ವೀಕ್ಷಣೆ’

ಯಲ್ಲಾಪುರ: ಸಂಸ್ಕಾರ ಶಿಕ್ಷಣ ಸೇವಾ ಪ್ರತಿಷ್ಠಾನ ಇವರಿಂದ ತಾಲೂಕಾ ಮಟ್ಟದ ರಾಮಾಯಣ, ಮಹಾಭಾರತ ಪರೀಕ್ಷೆ ಮತ್ತು ನಕ್ಷತ್ರ ವೀಕ್ಷಣೆ ಕಾರ್ಯಕ್ರಮ ಜ.15 ರಂದು ಸಂಜೆ 5 ಕ್ಕೆ ಪಟ್ಟಣದ ಹುಲ್ಲೋರಮನೆ ದೇವಸ್ಥಾನದ ಆವಾರದಲ್ಲಿ ನಡೆಯಲಿದೆ.

ತಹಸೀಲ್ದಾರ ಡಿ. ಜಿ. ಹೆಗಡೆ ಉದ್ಘಾಟಿಸಲಿದ್ದು, ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಭಟ್ಟ ಜೋಗಿನಜಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಎನ್. ಆರ್. ಹೆಗಡೆ, ಎನ್. ಕೆ. ಭಟ್ಟ, ಎಂ. ಆರ್. ಹೆಗಡೆ, ನಾರಾಯಣ ನಾಯಕ, ಆರ್. ಜಿ. ಭಟ್ಟ, ಚಂದ್ರಕಲಾ ಭಟ್ಟ, ಪ್ರಕಾಶ ನಾಯಕ, ಆರ್. ಆರ್. ಭಟ್ಟ, ಸುಬ್ರಹ್ಮಣ್ಯ ಹೆಗಡೆ, ನರಸಿಂಹ ಸಾತೊಡ್ಡಿ, ನಾರಾಯಣ ನಾಯಕ ನಂದಿನಿ, ಗಣಪತಿ ಬೋಳಗುಡ್ಡೆ, ಅನಂತ ಗಾಂವ್ಕಾರ ಭಾಗವಹಿಸಲಿದ್ದಾರೆ. ಡಾ.ಎ.ಪಿ.ಭಟ್ಟ ಉಡುಪಿ ಹಾಗೂ ದಿನೇಶ ಹೆಬ್ಬಾರ ಅವರಿಂದ ನಕ್ಷತ್ರ ವೀಕ್ಷಣೆ ವಿಶೇಷ ಕಾರ್ಯಕ್ರಮ ನಡೆಯಲಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.