ಭಜನಾ ಸ್ಪರ್ಧೆ; ಶ್ರೀಮಾತಾ ಮಹಿಳಾ ಮಂಡಳ ಪ್ರಥಮ


ಶಿರಸಿ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಸರ್ವಜ್ಞೇಂದ್ರ ಪ್ರತಿಷ್ಠಾನದ ಶಿರಸಿಯ ಯೋಗ ಮಂದಿರದ 23ನೇ ವಾರ್ಷಿಕೋತ್ಸವ ಅಂಗವಾಗಿ ಈಚೆಗೆ ಆಯೋಜಿಸಿದ್ದ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಶ್ರೀಮಾತಾ ಮಹಿಳಾ ಮಂಡಳ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಸಾಂಪ್ರದಾಯಿಕ ಶೈಲಿಯಲ್ಲಿ ತಾಳ ಮಾತ್ರ ಉಪಯೋಗಿಸಿ 5 ನಿಮಿಷಗಳ ಕಾಲ ಪ್ರಸ್ತುತಗೊಳಿಸಿದ ಭಜನೆಯು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ಆಯ್ಕೆಗೊಂಡಿದೆ. 6ಜನ ಸದಸ್ಯರನ್ನು ಒಳಗೊಂಡ ಭಜನಾ ತಂಡದಲ್ಲಿ ಹಕ್ರೆಮನೆಯ ಮಮತಾ ದತ್ತಾತ್ರಯ ಹೆಗಡೆ, ಶಶಿಕಲಾ ಆರ್ ಹೆಗಡೆ, ಪ್ರಭಾವತಿ ಎಮ್.ಹೆಗಡೆ ಹಾಗೂ ಮಣದೂರಿನ ವಿನೋದಾ ಎಲ್. ಭಟ್ಟ, ಆಶಾ ಶ್ರೀಪಾದ ಹೆಗಡೆ, ರಾಧಾ ಎಮ್ ಭಟ್ಟ ಇದ್ದರು. ಭಜನಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 14 ಭಜನಾ ತಂಡಗಳು ಭಾಗವಹಿಸಿದ್ದವು

Categories: ಜಿಲ್ಲಾ ಸುದ್ದಿ

Leave A Reply

Your email address will not be published.