ಭಗವದ್ಗೀತೆ ಕಂಠಪಾಟ ಸ್ಪರ್ಧೆ; ಸ್ಪಂದನಾ ಪ್ರಥಮ

ಶಿರಸಿ: ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನಲೆಯಲ್ಲಿ ಶಿರಸಿಯ ವಿವೇಕಾನಂದ ವಿಶ್ವ ಕಲ್ಯಾಣ ಹಾಗೂ ಸಾಧನ ಕೇಂದ್ರದ ಆಯೋಜನೆಯಲ್ಲಿ ಈಚೆಗೆ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಲೇಖನ ಮತ್ತು ಭಗವದ್ಗೀತಾ ಕಂಠಪಾಟ ಸ್ಪರ್ಧೆಯಲ್ಲಿ ಸ್ಪಂದನಾ ರವೀಂದ್ರ ಭಟ್ ಪ್ರಥಮ ಸ್ಥಾನ ಪಡೆದಿದ್ದಾಳೆ.

ಶಿರಸಿಯ ಆವೆಮರಿಯಾ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಸ್ಪಂದನಾ ಭಟ್ಟ ಹುತ್ಗಾರಿನ ರವೀಂದ್ರ ಭಟ್ ಮತ್ತು ಉಷಾ ಭಟ್ ದಂಪತಿಯ ಪುತ್ರಿಯಾಗಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.