ತದಡಿ ಶಾಲೆಗೆ ಭೇಟಿ ನೀಡಿದ ತಾ.ಪಂ ಅಧ್ಯಕ್ಷ, ಅಧಿಕಾರಿಗಳು


ಗೋಕರ್ಣ: ಇಲ್ಲಿನ ತದಡಿ ಉರ್ದು ಸರ್ಕಾರಿ ಶಾಲೆಗೆ ತಾಲೂಕಾ ಪಂಚಾಯತ ಅಧ್ಯಕ್ಷೆ ವಿಜಯಾ ಪಟಗಾರ, ತಾಲೂಕ ಪಂಚಾತ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ ಭೇಟಿ ನೀಡಿ ಬಿಸಿಯೂಟದ ವ್ಯವಸ್ಥೆ ಪರಿಶಿಲೀಸಿದರು.

ನೆರೆ ಹಾವಳಿಯಿಂದ ಅಡುಗೆ ಕೋಣೆಗೆ ಹಾನಿಯಾಗಿದ್ದು, ಕಟ್ಟಡ ದುರಸ್ತಿ ಈಗಾಗಲೇ ಶಾಸಕರ ನಿಧಿಯಿಂದ 1.5 ಲಕ್ಷ ಮಂಜೂರಾಗಿದ್ದು ಶೀಘ್ರದಲ್ಲೇ ದುರಸ್ತಿ ಕಾರ್ಯ ಪ್ರಾರಂಭವಾಗಲಿದೆ ಎಂದರು. ತಾಂ. ಪಂ. ಸದಸ್ಯ ಮಹೇಶ ಶೆಟ್ಟಿ, ಮುಖ್ಯಾಧ್ಯಾಪಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಶಾಲೆಯಲ್ಲೇ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಮಾಡಿದರು.

Categories: ಚಿತ್ರ ಸುದ್ದಿ

Leave A Reply

Your email address will not be published.