ಜ.15 ಕ್ಕೆ ಅಣಲಗಾರಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ

ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜ.15 ರಂದು ರಾತ್ರಿ 9.30 ಕ್ಕೆ ಸಂಕ್ರಾಂತಿ ಉತ್ಸವ, ಯಕ್ಷಋಷಿಗೆ ಶೃದ್ಧಾಂಜಲಿ, ಕಲಾ ಬಳಗದ ಉದ್ಘಾಟನೆ ಹಾಗೂ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ.

ದೇವಸ್ಥಾನದ ಅಧ್ಯಕ್ಷ ರಾಮಕೃಷ್ಣ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಸಿರಿ ಕಲಾ ಬಳಗವನ್ನು ಅನಂತ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಗುಮ್ಮಾನಿ ಉದ್ಘಾಟಿಸಲಿದ್ದಾರೆ. ಡಾ.ಶಂಕರ ಭಟ್ಟ ಬಾಲೀಗದ್ದೆ ಅವರು ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗ್ವತ ಅವರಿಗೆ ನುಡಿನಮನ ಸಲ್ಲಿಸಲಿದ್ದಾರೆ. ವಿ.ರಾಮಕೃಷ್ಣ ಭಟ್ಟ ಮಾಗೋಡ, ಗ್ರಾ.ಪಂ ಸದಸ್ಯ ನಾರಾಯಣ ಭಟ್ಟ ಭಟ್ರಕೇರಿ, ಪತ್ರಕರ್ತ ಜಿ. ಎನ್. ಭಟ್ಟ ಭಾಗವಹಿಸಲಿದ್ದಾರೆ.

ನಂತರ ವಾಮನ ಚರಿತ್ರೆ ಹಾಗೂ ಶರಸೇತು ಬಂಧನ ತಾಳಮದ್ದಲೆ ನಡೆಯಲಿದ್ದು, ಭಾಗವತರಾಗಿ ಶಶಾಂಕ ಬೋಡೆ, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ ಕಾರ್ಯನಿರ್ವಹಿಸಲಿದ್ದಾರೆ. ರಾಮಕೃಷ್ಣ ಭಟ್ಟ, ಶಿವರಾಮ ಭಾಗ್ವತ ಮಣ್ಕುಳಿ, ಶಿವರಾಮ ಭಟ್ಟ ಮೊಟ್ಟೆಗದ್ದೆ, ನರಸಿಂಹ ಭಟ್ಟ ಕುಂಕಿಮನೆ, ರವೀಂದ್ರ ಭಟ್ಟ ವೈದಿಕರಮನೆ, ಶ್ರೀಧರ ಅಣಲಗಾರ ಪಾತ್ರ ನಿರ್ವಹಿಸಲಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.