ಎಸ್.ಡಿ.ಎಂ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ದಿನ ಆಚರಣೆ

ಹೊನ್ನಾವರ: ಸ್ವಾಮಿ ವಿವೇಕಾನಂದರ 158 ನೇಯ ಜನ್ಮದಿನದ ಅಂಗವಾಗಿ ಎಸ್.ಡಿ.ಎಂ ಪ್ರಥಮದರ್ಜೆ ಕಾಲೇಜು ಹೊನ್ನಾವರದಲ್ಲಿ ಭಕ್ತಿಪೂರ್ವಕವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪುಷ್ಪನಮನವನ್ನು ಸಲ್ಲಿಸಿದರು. ಡಾ.ಎಂ.ಆರ್.ನಾಯಕ ಪ್ರಾಸ್ತಾವಿಕ ಮಾತನಾಡುತ್ತಾ ಸ್ವಾಮಿ ವಿವೇಕಾನಂದರು ಭಾರತವು ವಿಶ್ವಗುರುವಿನ ಸ್ಥಾನವನ್ನು ಪಡೆಯಬೇಕೆನ್ನುವುದು ಸಂಕಲ್ಪವಾಗಿ ಹೊಂದಿದ್ದರು. ಈ ಸಂಕಲ್ಪವನ್ನು ಸಾಕಾರಗೊಳಿಸಲು ಭಾರತದ ಯುವಜನೆತೆಯ ಮೇಲೆ ಅಪಾರವಾದ ವಿಶ್ವಾಸವನ್ನು ಇಟ್ಟಿದ್ದರು ಅವರ ದಿವ್ಯ ಸಂದೇಶವನ್ನು ಸಾಕಾರಗೊಳಿಸುವಲ್ಲಿ ನಮ್ಮ ಯುವಸಮುದಾಯ ದೇಶಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಯುವಜನರಿಗೆ ಪ್ರೇರಣೆಯನ್ನು ನೀಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಸ್ವಾಗತಿಸಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಆರ್.ಎಸ್.ಎಸ್. ಪ್ರಚಾರಕರಾದ ಸಂತೋಷ ಗೌಡರ್ ಭಾಗಲಕೋಟ ಇವರು ಯುವಜನರಿಗೆ ವಿವೇಕಾನಂದರ ಸಂದೇಶಗಳು ಎಂಬ ವಿಷಯದ ಮೇಲೆ ವಿವರವಾದ ಉಪನ್ಯಾಸವನ್ನು ನೀಡಿದರು. ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮೀ ಎಂ ನಾಯ್ಕ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಾವಿದ್ಯಾಲಯದ ಎಲ್ಲ ಶಿಕ್ಷಕ-ಶಿಕ್ಷಕೇತರರು ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದು ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯುವಲ್ಲಿ ಸಹಕರಿಸಿದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.