ಎಂ.ಎಂ ಕಾಲೇಜಿನ ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆ

ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕೆಟಲ್ ಕಾಲೇಜಿನಲ್ಲಿ ನಡೆದ ಬಿ.ಬಿ.ಟಿ. ಆಯ್ಕೆ ಪ್ರಕ್ರಿಯೆಯಲ್ಲಿ ನಗರದ ಎಮ್.ಇ.ಎಸ್ ಎಂ.ಎಂ Arts and Science ಕಾಲೇಜಿನ ವಿದ್ಯಾರ್ಥಿಗಳಾದ ಬಿ.ಎ ಪ್ರಥಮ ವರ್ಷದ ಸಮರ್ಥ ಭಟ್ಟ, ಮತ್ತು ಎಂಎಸ್ಸಿ ಪ್ರಥಮ ವರ್ಷದ ಶಶಾಂಕ ಭಟ್ಟ ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಗೊಂಡಿದ್ದಾರೆ.

ಜಿ.ಎಫ್.ಜಿ.ಸಿ ರಾಯಪುರದಲ್ಲಿ ನಡೆದ ಮಹಿಳೆಯರ ಬಿ.ಬಿ.ಟಿ ಆಯ್ಕೆ ಪ್ರಕ್ರಿಯೆಯಲ್ಲಿ ಮಹಾವಿದ್ಯಾಲಯದ ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ರೆಶ್ಮಾ ಪಿ ಶೆಟ್ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಗೊಂಡಿದ್ದಾಳೆ. ಮತ್ತು ದಾಂಡೆಲಿಯ ಬಂಗೂರ ನಗರದ ಕಾಲೇಜಿನಲ್ಲಿ ನಡೆದ ಚೆಸ್ ಆಯ್ಕೆ ಪ್ರಕ್ರಿಯೆಯಲ್ಲಿ ಮಹಾವಿದ್ಯಾಲಯದ ಬಿಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿನಿ ಪ್ರೀತಿ ಹೆಗಡೆ ಚೆಸ್ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಗೊಂಡಿದ್ದಾಳೆ.

ಇವರ ಸಾಧನೆಗೆ ಎಂ.ಇ.ಎಸ್ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಕಾಲೇಜು ಉಪಸಮಿತಿ ಅಧ್ಯಕ್ಷರು, ಸದಸ್ಯರು, ಕಾಲೇಜಿನ ಪ್ರಾಚಾರ್ಯರು, ಎಲ್ಲಾ ಬೋಧಕ- ಬೋಧಕೇತರ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.