ಅದ್ದೂರಿಯಾಗಿ ನಡೆದ ರಾಘವೇಶ್ವರ ಭಾರತಿ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ


ಗೋಕರ್ಣ: ಇಲ್ಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೊಡರ್ನ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದ ಅತಿಥಿಯಾಗಿ ಉತ್ತರ ಕನ್ನಡದ ಜಿಲ್ಲಾ ಪಂಚಾಯತ ಸದಸ್ಯರಾದ ಪ್ರದೀಪ ಡಿ ನಾಯಕ ದೇವರ ಭಾವಿ ಹಾಗೂ ಅಂಕೋಲ ತಾಲೂಕಿನ ಲೇಖಕರು, ಸಾಹಿತಿಗಳಾದ ಮಹಾಂತೇಶ ರೆವಡಿ, ಸಂಸ್ಥೆಯ ಅಧ್ಯಕ್ಷರಾದ ಸಂತೋಷ ನಾಯಕ ತೊರ್ಕೆ, ಮೆನೆಜಿಂಗ್ ಟ್ರಸ್ಟಿ ಡಾ. ಎಮ್.ಡಿ.ನಾಯ್ಕ, ಉಪಾಧ್ಯಕ್ಷರಾದ ನಾಗೇಂದ್ರ ಶೇಟ್, ಮುಖ್ಯಾಧ್ಯಾಪಕ ರಾಜೇಶ ಗೋನ್ಸಾಲ್ವೀಸ್, ಮುಖ್ಯಾಧ್ಯಾಪಕಿ ಉಷಾ ನಾಯಕ, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಮಕ್ಕಳ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮವನ್ನು ನೋಡಲು ಸಾವಿರಾರು ಜನರು ಆಗಮಿಸಿ, ಕೇಕೆ ಹಾಕಿ ಖುಷಿಪಟ್ಟರು.

Categories: ಚಿತ್ರ ಸುದ್ದಿ

Leave A Reply

Your email address will not be published.