NHAI, IRB ಅಧಿಕಾರಿಗಳೊಂದಿಗೆ ಸಂಸದ ‘ಅನಂತ’ ಚರ್ಚೆ; ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾರ್ಯಗತಗೊಳಿಸಲು ಸೂಚನೆ

 

ಶಿರಸಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐ.ಆರ್.ಬಿ ಕಂಪನಿಯ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ನಂ.66 ರ ಕಾಮಗಾರಿ ಕುರಿತು ಸಭೆಯನ್ನು ಜ. 12 ರಂದು ಶಿರಸಿಯಲ್ಲಿ ಸಂಸದ ಅನಂತಕುಮಾರ ಹೆಗಡೆ ವಿಸ್ತøತವಾಗಿ ಚರ್ಚಿಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.

ಕಾರವಾರದ ಮಾಜಾಳಿಯಿಂದ ಭಟ್ಕಳದ ಬೆಳಕೆವರೆಗೆ ಉತ್ತರ ಕನ್ನಡ ಜಿಲ್ಲೆಯನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಂ.66 ರಲ್ಲಿ ಪದೇ ಪದೇ ಅಪಘಾತಗಳಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಯ ಕೆಲವು ಪ್ರದೇಶಗಳಲ್ಲಿ ವೈಜ್ಞಾನಿಕವಾಗಿ ಕೆಲವು ಮಾರ್ಪಾಡುಗಳಿಗೆ ಸೂಚಿಸಲಾಯಿತು.

ಹಾರವಾಡದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ, ಸೀಬರ್ಡ ಕಾಲೋನಿಯಿಂದ ಅಂಕೋಲಾದವರೆಗೆ ಸರ್ವೀಸ್ ರಸ್ತೆಯನ್ನು ನಿರ್ಮಿಸುವುದರ ಜೊತೆಗೆ ಈ ಭಾಗದಲ್ಲಿ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದುಹೋಗುವಂತೆ ಕ್ರಮ ವಹಿಸುವುದು. ಆವರ್ಸಾ, ಕರ್ಕಿ, ಹಳದೀಪುರ, ಹೊನ್ನಾವರ ಹಾಗೂ ಶಿರಾಲಿಗಳಲ್ಲಿ 30 ಮೀಟರ್ ನಿಂದ 45 ಮೀಟಲ್ ವರೆಗೆ ಹೆದ್ದಾರಿ ಅಗಲ ಹೆಚ್ಚಿಸುವುದು ಜೊತೆಗೆ ಸರ್ವೀಸ್ ರೋಡ್ ಅಳವಡಿಸುವುದು ಪುರವರ್ಗದಲ್ಲಿ ಹೆದ್ದಾರಿ ಕಾಮಗಾರಿ ತಕ್ಷಣ ಪ್ರಾರಂಭಿಸುವುದು, ಕಾರವಾರ ಕಡೆಯಿಂದ ಅಂಕೋಲಾ ಪ್ರವೇಶಿಸುವ ಹೆದ್ದಾರಿ ಭಾಗದಲ್ಲಿ ವೃತ್ತ ನಿರ್ಮಿಸುವುದು ಹಾಗೂ ಸಣ್ಣ ವಾಹನಗಳಿಗಾಗಿ ಅಂಡರ್ ಪಾಸ್ ನಿರ್ಮಿಸುವುದು, ಬರ್ಗಿಯಲ್ಲಿ Foot Over Bridge ಅಳವಡಿಸುವುದು, ಹಿರೇಗುತ್ತಿ ನುಶಿಕೋಟೆಗೆ ಹೋಗುವ ಮಾರ್ಗಕ್ಕೆ ಹೊಂದಿಕೊಂಡಂತೆ ಸರ್ವೀಸ್ ರಸ್ತೆ ನಿರ್ಮಿಸಲು ಕ್ರಮ ತೆಗೆದುಕೊಳ್ಳಲು ಸೂಚಿಸಲಾಯಿತು.

ಕುಮಟಾ-ಶಿರಸಿ ರಸ್ತೆಯ ದಿವಗಿಯಲ್ಲಿ ಅಪಘಾತ ನಿಯಂತ್ರಣಕ್ಕಾಗಿ ಸಿಗ್ನಲ್ ಅಳವಡಿಸುವುದು ಹಾಗೂ ಹೆಚ್ಚುವರಿ ಭೂಸ್ವಾಧೀನ ಮಾಡಿಕೊಂಡು ಶಾಶ್ವತ ರಸ್ತೆ ವಿಸ್ತರಣೆ ಮಾಡುವುದು ಹಾಗೂ ರಸ್ತೆ ನಿರ್ಮಾಣ ತಜ್ಞರ ಅಭಿಪ್ರಾಯ ಪಡೆದು ಮೇಲ್ಸೆತುವೆ ನಿರ್ಮಾಣ ಮಾಡಿದಲ್ಲಿ ವಾಹನ ಸಂಚಾರ ಸುಗಮವಾಗುತ್ತದೆ. ಮಂಕಿಯಲ್ಲಿ ಸರ್ವೀಸ್ ರೋಡ್ ಮತ್ತು ಅಂಡರ್ ಪಾಸ್ ನಿರ್ಮಿಸುವುದು, ಕಾಯ್ಕಿಣಿಯಲ್ಲಿ ಅಂಡರ್ ಪಾಸ್ ನಿರ್ಮಾಣ, ಕೆಳಗಿನೂರಿನಲ್ಲಿ ರಸ್ತೆ ಸುರಕ್ಷತೆಗೆ ಮೆಟಲ್ ಬೀಮ್ ಅಳವಡಿಸುವುದು. ಭಟ್ಕಳ ಪಟ್ಟಣದಲ್ಲಿ ಅಂಡರ್ ಪಾಸ್ ನಿರ್ಮಿಸುವುದು ಹಾಗೂ ಸರ್ವಿಸ್ ರಸ್ತೆ ಅಳವಡಿಸುವುದು ಸೇರಿದಂತೆ ಮುಂತಾದ ಅವಶ್ಯಕ ಕೆಲಸಗಳನ್ನು ಹೆದ್ದಾರಿ ಯೋಜನೆಯನ್ನು ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಅಧಿಕಾರಿಗಳು ಸಂಸದರ ನಿರ್ದೇಶನಗಳನ್ನು ಯೋಜನೆಯಲ್ಲಿ ಅಳವಡಿಸಿಕೊಂಡು ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವುದಾಗಿ ಒಪ್ಪಿಕೊಂಡರು ಹಾಗೂ ರಸ್ತೆ ನಿರ್ವಹಣಾ ಅವಧಿಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಕಾಮಗಾರಿಗಳನ್ನು ಮಾಡುವುದಾಗಿ ತಿಳಿಸಿದರು. ಮಾನ್ಯ ಸಂಸದರೊಂದಿಗೆ ಜರುಗಿದ ಈ ಸಭೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಶಿಸು ಮೋಹನ್, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಕಿರಣ ಬಿಸೂರ್, ನವೀನ್ ಐ.ಆರ್.ಬಿ ಕಂಪನಿಯ ಮುಖ್ಯ ವ್ಯವಸ್ಥಾಪಕ ಮೋಹನದಾಸ, ಎಸ್,ಎನ್. ಕುಲಕರ್ಣಿ ಮುಂದಾದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಸಂಸದರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.