ಇನ್ನೊವಾ-ಬೈಕ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಗಂಭೀರ; ಕಾರು ಚಾಲಕ ಪರಾರಿ

ಶಿರಸಿ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನೊರ್ವ ಗಂಭೀರವಾಗಿ ಗಾಯಗೊಂಡು, ಕಾರು ಚಾಲಕ ಪರಾರಿಯಾದ ಘಟನೆ ಇಲ್ಲಿನ ಕದಂಬ ಸೌಹಾರ್ದ ಸಂಸ್ಥೆಯ ಎದುರು ನಡೆದಿದೆ.
ಅಪಘಾತದಲ್ಲಿ ತಾಲೂಕಿನ ನೇಗಾರಿನ ಅನಂತ ಹೆಗಡೆ (19) ಗಂಭಿರವಾಗಿ ಗಾಯಗೊಂಡಿದ್ದು, ಹಿಂಬದಿ ಸವಾರ ನೇಗಾರಿನ ಮನೋಜ್ ಹೆಗಡೆಗೆ (19) ಸಣ್ಣಪುಟ್ಟ ಗಾಯಗಳಾಗಿದೆ. ಇನ್ನು ಅಪಘಾತ ನಡೆಯುತ್ತಿದ್ದಂತೆ ಮುಂಡಗೋಡಿನ ಮಳಗಿಯ ವ್ಯಕ್ತಿ ಎನ್ನಲಾದ ಕಾರು ಚಾಲಕ ಗಾಡಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ದ್ವಿಚಕ್ರ ವಾಹನದಲ್ಲಿ ಇಬ್ಬರು ರಾಘವೇಂದ್ರ ಸರ್ಕಲ್ ನಿಂದ ಐದು ರಸ್ತೆಯ ಬಳಿ ಹೋಗುತ್ತಿರುವಾಗ ಮಳಗಿಯ ಕಾರು ಐದು ರಸ್ತೆಯ ಕಡೆಯಿಂದ ಬಂದು, ಕದಂಬ ಸಂಸ್ಥೆಯ ಎದುರಿನ ತಿರುವಿನಲ್ಲಿ ಒಮ್ಮೆಲೆ ಟಿವಿ ಸ್ಟೇಶನ್ ರೋಡ್ ಗೆ ತಿರುಗಿದ ಪರಿಣಾಮ ಬೈಕ್ ಗೆ ಡಿಕ್ಕಿ ಹೊಡೆದಿದೆ.
euttarakannada.in

Categories: ಚಿತ್ರ ಸುದ್ದಿ

Leave A Reply

Your email address will not be published.