ಕಳ್ಳತನ ಪ್ರಕರಣ: ಬಂಗಾರ ಸಮೇತ ಆರೋಪಿಗಳನ್ನು ಬಂಧಿಸಿದ ಕುಮಟಾ ಪೊಲೀಸರು


ಕುಮಟಾ: ಮನೆಯಲ್ಲಿ ಯಾರೂ ಇಲ್ಲದ ವೇಳೆ 9,81,000 ರೂಪಾಯಿ ಮೌಲ್ಯದ ಸುಮಾರು 392 ಗ್ರಾಂ ತೂಕದ ಬಂಗಾರ ದೋಚಿದ ಆರೋಪಿಗಳನ್ನು ಸೆರೆ ಹಿಡುಯುವುದರಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಹೆಗಡೆ ಕ್ರಾಸ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಸಮೀಪದ ಗಾಂಧಿನಗರದ ನಿವಾಸಿಯಾದ ಗಜಾನನ ಗೋಪಾಲಕೃಷ್ಣ ಗೌರಯ್ಯ ಎಂಬವರ ಮನೆಯಲ್ಲಿ ಆಭರಣ ಕಳುವಾಗಿತ್ತು. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕಟಣ ದಾಖಲಾಗಿತ್ತು. ಇಬ್ಬರು ಆರೋಪಿಗಳಾದ ಗೋಪಿ ಗಣೇಶನ್, ಕಳತ್ತೂರ್ ಅರಸಮರತಿರ್, ಕಾಂಚಿಪುರಂ ತಮಿಳುನಾಡು, ಹಾಗೂ ಡೇವಿಡ್ ಪ್ರಾನ್ಸಿಸ್ ಮಾಗಡಿ ರೋಡ್ ಬೆಂಗಳೂರಿನ ನಿವಾಸಿಗಳಾಗಿದ್ದು, ಇನ್ನೋರ್ವ ಆರೋಪಿ ರಾಜು ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಳಿಂದ ಕಳ್ಳತನ ಮಾಡಿದ್ದ ಸುಮಾರು 289 ಗ್ರಾಂ ಬಂಗಾರದ ಆಭರಣಗಳು, ನಗುದು, ಕಳ್ಳತನಕ್ಕೆ ಬಳಸಿದ ಆಯುಧ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಲಾಗಿದೆ.

ಆರೋಪಿತರು ತಮಿಳುನಾಡು, ಮತ್ತು ಬೆಂಗಳೂರಿನವರಾಗಿದ್ದು ಬೆಂಗಳೂರಿನ ಹಲಾವರು ಕಳ್ಳತನ ಮತ್ತು ದರೋಡೆ ಯತ್ನ ಪ್ರಕ್ರಣಗಳಲ್ಲಿ ಭಾಗಿಯಾಗಿದ್ದವರಾಗಿದ್ದು, ಜ.1 ರಂದು ಹೊಸ ವರ್ಷಾಚರಣೆಗೆಂದು ಗೋವಾಕ್ಕೆ ತೆರಳಿ ವಾಪಸ್ಸಾಗುವ ಸಂದರ್ಭದಲ್ಲಿ ಅಂಕೋಲಾದ ಕೇಬಲ್ ಆಫಿಸ್ ಒಂದರ ಬಾಗಿಲು ಒಡೆದು ನಗದು ಹಣವನ್ನು ಕಳ್ಳತನ ಮಾಡಿದ್ದಲ್ಲದೇ, ಕುಮಟಾದಲ್ಲಿ ಮನೆಯ ಹಿಂಬಾಗಿಲು ಒಡೆದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ತೆರಳಿದ್ದರು. ನಂತರ ಕಳೆದ ಭಾನುವಾರ ನಸುಕಿನ ವೇಳೆ ಮತ್ತೆ ಕಳ್ಳತನ ಮಾಡಲು ಕುಮಟಾಕ್ಕೆ ಬರುತ್ತಿರುವ ಸಂದರ್ಭದಲ್ಲಿ ಪಟ್ಟಣದ ಗಿಬ್ ವೃತ್ತದ ಬಳಿ ಎಸ್.ಪಿ ಶಿವಪ್ರಕಾಶ್ ದೇವರಾಜ, ಎಎಸ್ಪಿ ನಿಖಿಲ್ ಬಿ, ಸಿಪಿಐ ಪರಮೇಶ್ವರ ಗುನಗಾ, ಪಿಎಸೈ ಆನಂದ ಮೂರ್ತಿ, ಕ್ರೈಂ ಪಿಎಸೈ ಸುಧಾ ಅಘನಾಶಿನಿ ನೇತ್ರತ್ವದ ತಂಡ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿತರನ್ನು ಕಳ್ಳತನ ಮಾಡಿದ ಆಭರಣಗಳ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣ ಬೇಧಿಸುವಲ್ಲಿ ಸಿಬ್ಬಂದಿಗಳಾದ ಚಾಲಕ ತಿಮ್ಮಣ್ಣ ನಾಯಕ, ಮಾರುತಿ ಗಾಳಪೂಜಿ, ದಯಾನಂದ ನಾಯ್ಕ, ಸಂತೋಷ ಬಾಳೆರಾ, ಕೃಷ್ಣ ಎನ್.ಜೆ, ಬಸವರಾಜ ಜಾಡರ, ಹುಚ್ಚಪ್ಪ ಚಾವಡಿ, ಸುರೇಂದ್ರ ಮಗದಮ್ಮ, ಹಾಲಪ್ಪ ಬಾಗಿ ಹಾಗೂ ಹೋಮ್ ಗಾರ್ಡಗಳಾದ ಬಾಬುರಾಯ, ಮೋಹನ ಮತ್ತು ನಾರಾಯಣ ಪಟಗಾರ ಇವರುಗಳು ಸಹಕರಿಸಿದ್ದು, ಜಿಲ್ಲಾ ಪೆÇಲೀಸ್ ವರಿಷ್ಠಾರಿಗಳಾದ ಶಿವಪ್ರಕಾಶ್ ದೇವರಾಜ ಹಾಗೂ ಭಟ್ಕಳ ಎ.ಎಸ್ಪಿ ನಿಖಿಲ್ ಬಿ ಅವರು ಸಿಬ್ಬಂಧಿಗಳ ಉತ್ತಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಶಿಸಿದ್ದಾರೆ.

Categories: ಜಿಲ್ಲಾ ಸುದ್ದಿ

1 Comment

Leave A Reply

Your email address will not be published.