ಹೊಲಕ್ಕೆ ಬಂದ ಆನೆ ಹಿಂಡು: ಬೆನ್ನಟ್ಟಿ ಹೋದ ಇಬ್ಬರಿಗೆ ಗಂಭೀರ ಗಾಯ


ಮುಂಡಗೋಡ: ತಾಲೂಕಿನ ಕಾತೂರ ವಲಯದ ನಾಗನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹೊಲಕ್ಕೆ ಬಂದ ಆನೆಗಳ ಹಿಂಡನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಲು ಹೋಗಿದ್ದ ಇಬ್ಬರಿಗೆ ಹಿಂಡಲ್ಲಿದ್ದ ಒಂದು ಆನೆಯೆ ಬೆನ್ನಟ್ಟಿ ಬಂದು ಅಟ್ಟಾಡಿಸಿ ಗಾಯಪಡಿಸಿ ಒಬ್ಬನಿಗೆ ಗಂಭೀರ ಗಾಯವಾದರೆ ಮತ್ತೊಬ್ಬನಿಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಸಿದ ಘಟನೆ ರಾತ್ರಿ ಜರುಗಿದೆ.

ಗಂಭೀರ ಗಾಯಗೊಂಡು ಕಿಮ್ಸ್ ಗೆ ದಾಖಲಿಸಿದವನನ್ನು ದಾವಲಸಾಭ ಮುಜಾವರ ಎಂದು ಮತ್ತೊಬ್ಬ ಸಣ್ಣ ಪುಟ್ಟ ಗಾಯಗೊಂಡು ತಾಲೂಕಾ ಆಸ್ಪತ್ರೆಗೆ ದಾಖಲಾದವನನ್ನು ಚಂದ್ರು ಚನ್ನಪ್ಪನವರ ಎಂದು ತಿಳಿದು ಬಂದಿದೆ. ನಾಗನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಅರಣ್ಯಕ್ಕೆ ಬುಧವಾರ ರಾತ್ರಿ ಆನೆಗಳ ಹಿಂಡು ಬಂದಿದ್ದು ಅವುಗಳನ್ನು ಓಡಿಸುವ ಪ್ರಯತ್ನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರಿ ಸಾರ್ವಜನಿಕರ ಜೊತೆಯಲ್ಲಿ ಕಾರ್ಯನಿರತರಾಗಿದ್ದಾರೆ ಗಾಯಗೊಂಡವರ ಇಬ್ಬರ ಮಕ್ಕಳು ಕೂಡ ಅರಣ್ಯ ಇಲಾಖೆ ಸಿಬ್ಬಂದಿಗಳ ಜೋತೆಯಲ್ಲೆ ಆನೆ ಹಿಂಡನ್ನು ಓಡಿಸಲು ಹೋಗಿದ್ದಾರೆ ಎನ್ನಲಾಗಿದೆ.

ರಾತ್ರಿ 12 ಘಂಟೆಯ ಸಮಯದಲ್ಲಿ ಸಣ್ಣಪುಟ್ಟ ಗಾಯವಾದ ಚಂದ್ರುಚನ್ನಪ್ಪನವರ ಬಂದು ಗಂಭೀರ ಗಾಯವಾದ ದಾವಲ ಸಾಭ ಮುಜಾವರ ಮನೆಗೆ ಬಂದು ಆನೆಗಳ ಹಿಂಡು ಬಂದಿವೆ ಅವನ್ನು ಓಡಿಸಿ ಬರೋಣ ಬಾ ಎಂದು ಕರೆದಿದ್ದಾನೆ. ಅರಣ್ಯದ ಅಂಚಿನಲ್ಲಿ ಊರಗಡಿ ದಾಟುವಷ್ಟರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯಕ್ಕೆ ಓಡಿಸಿದ ಆನೆ ಹಿಂಡಿನಲ್ಲಿ ಒಂದು ಆನೆ ತಪ್ಪಿಸಿಕೊಂಡು ಗ್ರಾಮದಂತ ಬರುತ್ತಿದೆ. ಅದನ್ನು ಕಂಡ ಈ ಎರಡು ಜನ ಗಾಯಾಳುಗಳು ಚೀರಾಡಲು ಆರಂಭಿಸಿದಾಗ ಆನೆ ಅರಣ್ಯದತ್ತ ಓಡತೋಡಗಿದೆ. ಅದು ಓಡುತ್ತಿದೆ ಎಂದು ಅದರ ಹಿಂದೆ ಹಿಂದೆ ಓಡಲಾರಂಭಿಸಿದ ಇಬ್ಬರು ಅರಣ್ಯದಲ್ಲಿ ಬಹಳ ದೂರ ಹೋಗಿದ್ದಾರೆ ಮುಂದೆ ಆನೆಗೆ ಹೋಗಲು ಆಗದಂತ ನೀರು ಹರಿಯುತ್ತಿರುವ ಹಳ್ಳವನ್ನು ನೋಡಿದ ಆನೆ ತಿರುಗಿ ಇವರಿಬ್ಬರನ್ನು ಬೆನ್ನಟ್ಟಿದೆ. ಅದರಿಂದ ತಪ್ಪಿಸಿಕೊಳ್ಳಲು ಹೋದ ಒಬ್ಬನಿಗೆ ದಾಳಿ ಮಾಡಿ ಗಂಭಿರವಾಗಿ ಗಾಯಪಡಿಸಿದೆ ಆತನನ್ನು ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿದೆ. ಮತ್ತೋಬ್ಬ ತಪ್ಪಿಸಿಕೊಳ್ಳುವ ಅವಸದಲ್ಲಿ ಎದ್ದು ಬಿದ್ದು ಸಣ್ಣ ಪುಟ್ಟಗಾಯವಾಗಿ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕಿಮ್ಸಗೆ ದಾಖಲಿಸಲಾದ ದಾವಲಸಾಭ ಮುಜಾವರನನ್ನು ಇಂದು ಅರಣ್ಯ ಇಲಾಖೆಯ ಎಸಿ,ಎಪ್ ಶ್ರೀಶೈಲ ವಾಲಿ ಹಾಗೂ ಕಾತೂರ ವಲಯದ ಆರ್,ಎಪ್,ಒ ಅಜಯ ನಾಯ್ಕ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.