ಸುವಿಚಾರ

ಕರೋತು ನಾಮ ನೀತಿಜ್ಞೋ ವ್ಯವಸಾಯಮಿತಸ್ತತಃ
ಫಲಂ ಪುನಸ್ತದೇವಾಸ್ಯ ಯದ್ವಿಧೇರ್ಮನಸಿ ಸ್ಥಿತಮ್ ||

ಒಬ್ಬ ಕುಶಲಿ, ವ್ಯಹವಾರ ತಿಳಿದ ಮನುಷ್ಯ, ನೀತಿಯನ್ನೂ ತಿಳಿದಾತ, ತನ್ನ ಕಾರ್ಯವನ್ನು ಫಲವನ್ನು ಲಕ್ಷ್ಯದಲ್ಲಿಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ಯೋಜಿಸಿ ಮಾಡಬಹುದು. ಹಲವಾರು ಬದಲಾವಣೆ, ಸುಧಾರಣೆ, ಯೋಜನೆಗಳ ನಂತರವೂ ಕೊನೆಯಲ್ಲಿ ಹೊರಬರುವ ಫಲವು ಮಾತ್ರ ವಿಧಿಯ ಮನಸಿಗನುಗುಣವಾಗಿಯೇ ಇರುತ್ತದೆ, ನಮ್ಮ ಮನಸಿಗನುಗುಣವಾಗಿ ಅಲ್ಲ. ಕರ್ಮಣ್ಯೇವಾಧಿಕಾರಸ್ತೇ ಅಂದ ಗೀತಾಚಾರ್ಯನ ಅಭಿಪ್ರಾಯವೂ ಇದೇ. ಫಲವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಅನ್ನುವುದು ತಥ್ಯ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.