ಶಿರಸಿಯಲ್ಲಿ ಡಿ.19ಕ್ಕೆ ಉದ್ಯೋಗ ಮೇಳ

ಶಿರಸಿ: ನಗರದ ಮರಾಠಿಕೂಪ್ಪದ ಸ್ಕೊಡ್‌ವೆಸ್ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಡಿ.19 ರಂದು ಸ್ಕೊಡ್‌ವೆಸ್ ಸಂಸ್ಥೆಯು 2019-20ನೇ ಸಾಲಿನ ಜೀವನಕ್ಕಾಗಿ ಕೌಶಲ ಯೋಜನೆಯಡಿ ತರಬೇತಿ ಹಾಗೂ ಉದ್ಯೋಗಕ್ಕಾಗಿ ನಿರುದ್ಯೋಗಿ ಯುವಕ ಯುವತಿಯರ ಆಯ್ಕೆಗಾಗಿ ಲಘು ಉದ್ಯೋಗ ಮೇಳ ಆಯೋಜಿಸಿದೆ.

ಬಿಕಾಂ ಪದವಿ ಹೊಂದಿದವರಿಗೆ ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್ ಹಾಗೂ ಹಣಕಾಸು ಕ್ಷೇತ್ರದಲ್ಲಿ ಅಕೌಂಟ್ ಎಕ್ಸಿಕ್ಯೂಟಿವ್ ಹುದ್ದೆ, 10ನೇ ತರಗತಿ ಉತ್ತೀರ್ಣರಾದವರಿಗೆ ಆರೋಗ್ಯ ಸಹಾಯಕರು ಹಾಗೂ ಸಹಾಯಕರ ಔಷಧ ವಿತರಕರ (ಫಾರ್ಮಸಿ ಅಸಿಸ್ಟೆಂಟ್) ಹುದ್ದೆ, ಗ್ರಾಹಕ ಸೇವೆ (ರಿಟೇಲ್), ಕ್ಷೇತ್ರದಲ್ಲಿ ಕ್ಯಾಶಿಯರ್ ಹಾಗೂ ಸ್ಟೋರ್ ಆಪರೇಷನ್ ಅಸಿಸ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿರಸಿಯಲ್ಲಿ ಉಚಿತ ವಸತಿಯುತ ತರಬೇತಿಯನ್ನು ನೀಡಲಾಗುವುದು. ಆಸಕ್ತರು ಸ್ವ ವಿವರ ಹಾಗೂ ವಿದ್ಯಾರ್ಹತೆಯ ದಾಖಲೆಗಳ ಪ್ರತಿಯನ್ನು ಸ್ಕೊಡ್‌ವೆಸ್ ಸಂಸ್ಥೆ, ಸವಿನಿಲಯ ಬಿಲ್ಡಿಂಗ್, ಮರಾಠಿಕೊಪ್ಪ ಮುಖ್ಯ ರಸ್ತೆ, ಶಿರಸಿ ಇಲ್ಲಿಗೆ ಅಥವಾ ಇಮೇಲ್ skilltraining@gmail.com ಗೆ ಸಲ್ಲಿಸಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗಾಗಿ ದೂ. 08384-236398, 9741519647, 9900195285, 9980247048 ಗೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.