ವಿಜೃಂಭಣೆಯಿಂದ ನಡೆದ ಭದ್ರಕಾಳಿ ದೇವಿ ರವಕೆ ಉತ್ಸವ


ಗೋಕರ್ಣ: ಪಂಚಗ್ರಾಮ ದೈವಜ್ಞ ಸಮಾಜ ಸಂಘದ ವತಿಯಿಂದ ಪುರಾಣ ಪ್ರಸಿದ್ದ ಕ್ಷೇತ್ರದ ಶಕ್ತಿ ದೇವತೆ ಭದ್ರಕಾಳಿ ದೇವಿಯ ರವಕೆ ಉತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.

ಐದು ದಶಕಗಳ ಹಿಂದೆ(1962 ನೇ ಸಾಲಿನಲ್ಲಿ) ಈ ಸಮಾಜದವರು ದೇವಿಗೆ ಚಿನ್ನದ ರವಕೆ ಸಮರ್ಪಣೆ ಮಾಡಿದ್ದು, ಅದರಂತೆ ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಉತ್ಸವ, ವಿಶೇಷ ಪೂಜೆ ನಡೆಸುತ್ತಿರುವುದು ವಿಶೇಷ. ಈ ಭಾಗದ ದೈವಜ್ಞ ಸಮಾಜದವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು. ದೇವರ ಉತ್ಸವ ಭದ್ರಕಾಳಿ ದೇವಾಲಯದಿಂದ ಹೊರಟು ದೈವಜ್ಞ ಕಲ್ಯಾಣ ಮಂಟಪಕ್ಕೆ ಬಂದು ತಾರಮಕ್ಕಿ ಮಾರ್ಗವಾಗಿ ದೇವಾಲಯಕ್ಕೆ ಮರಳುತ್ತದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.