ಮುಂಡಗೋಡಕ್ಕೆ ಆಗಮಿಸಿದ ದಲಾಯಿಲಾಮಾ: ಸಾಂಪ್ರದಾಯಿಕವಾಗಿ ಸ್ವಾಗತ

ಮುಂಡಗೋಡ: ಟಿಬೇಟಿಯನ್ನ ಧರ್ಮಗುರು ಹಾಗೂ ನೊಬೇಲ್ ಶಾಂತಿ ಪ್ರಶಸ್ತಿ ವಿಜೇತ 14 ನೇ ದಲಾಯಿ ಲಾಮಾ ಅವರು ಲಾಮಾಕ್ಯಾಂಪ ನಂಬರ 2 ರಡ್ರೆಪುಂಗ್ ಲಾಚಿ ಬೌದ್ದ ಮಂದಿರಕ್ಕೆ ಆಗಮಿಸಿದರು.

ಲಾಚಿಬೌದ್ದ ಮಂದಿರದಲ್ಲಿ ಬೌದ್ದ ಮುಖಂಡರುಗಳು ದಲಾಯಿ ಲಾಮಾರಿಗೆ ಸಾಂಪ್ರದಾಯಕವಾಗಿ ಸ್ವಾಗತ ಕೋರಿದರು. ಅಲ್ಲಿದ್ದ ಹಿರಿಯ ವೃದ್ದ ಮುಖಂಡರುಗಳನ್ನು ಭೇಟಿ ಮಾಡಿದ ಅವರು ಯೋಗಕ್ಷೇಮ ವಿಚಾರಿಸಿ ಬೌದ್ದ ಮಠದಲ್ಲಿ ಪೂಜೆ ಸಲ್ಲಿಸಿ ಲಾಮಾಗಳನ್ನು ಉದ್ದೇಶಿಸಿ ದಲಾಯಿಲಾಮಾ ಅವರು ಆಶೀರ್ವಚನ ನೀಡಿದರು. ಬೌದ್ಧ ಅಧ್ಯಯನ ಹಾಗೂ ವಿಜ್ಞಾನದ ಜೊತೆಗೆ ಸಾಗಬೇಕು ಮತ್ತು ನಳಂದ ಪರಂಪರೆಯನ್ನು ಮುಂದೆವರೆಸಿಕೊಂಡು ಹೋಗಲು ಬದ್ದರಾಗಬೇಕು. ಇತ್ತೀಚೆಗೆ ಗೋವಾ ವಿಶ್ವ ವಿದ್ಯಾಲಯದಲ್ಲಿ ನಳಂದಾ ಪರಂಪರೆ ಅಧ್ಯಯನಕ್ಕೆ ಚಾಲನೆ ನೀಡಿರುವುದು ಹೆಚ್ಚು ಸಂತೋಷ ತಂದಿದೆ ಎಂದರು.

ತಾಲೂಕಿನ ವಡಗಟ್ಟಾಚೆಕ್ ಪೋಸ್ಟ ಹತ್ತಿರದ ಲಾಯಿಲಾಮಾ ಅವರಿಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಹೂಗುಚ್ಚ ನೀಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿಇಒ ಮೊಹಮ್ಮದ ರೋಶನ, ಶಿರಶಿ ಉಪ ವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ತಾಲೂಕಾ ದಂಡಾಧಿಕಾರಿ ಶ್ರೀಧರ ಮುಂದಲಮನಿ, ತಾಲೂಕು ಪಂ ಇಒ ಪ್ರವೀಣಕಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.