ಮನೆಗೆ ತಗುಲಿದ ಬೆಂಕಿ: ಅಪಾರ ಹಾನಿ

ಮುಂಡಗೋಡ: ಮನೆಯೊಂದಕ್ಕೆ ಬೆಂಕಿ ತಗುಲಿ ಮನೆ ಸುಟ್ಟು ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ ಬರೆಗಳು, ಪಾತ್ರೆಗಳು ಮತ್ತು ಇನ್ನಿತರ ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿ ಅಪಾರ ನಷ್ಟವಾದ ಘಟನೆ ತಾಲೂಕಿನ ಭದ್ರಾಪುರ ಹೊಸ ನಗರ ಗ್ರಾಮದಲ್ಲಿ ನಡೆದಿದೆ.

ಬೆಂಕಿ ತಗುಲಿ ಸುಟ್ಟ ಮನೆ ಮಹಮ್ಮದ ಶರೀಫ್ ಹಟ್ಟಿಮನಿ ಎಂಬುವರಿಗೆ ಸೇರಿದ್ದು ಎನ್ನಲಾಗಿದ್ದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮೇಲೆ ಹೊಗೆ ಆವರಿಸಿದ್ದನ್ನು ಕಂಡ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅಷ್ಟರೊಳಗೆ ಬೆಂಕಿ ಪೂರ್ತಿ ಮನೆಯನ್ನು ಆವರಿಸಿಕೊಂಡು ಮನೆಯಲ್ಲಿದ್ದ ದವಸ ಧಾನ್ಯ, ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.