ಕರ್ತವ್ಯನಿರತ ವೈದ್ಯರಿಗೆ ಕಿರುಕುಳ: ದೂರು ದಾಖಲು

ಗೋಕರ್ಣ: ಕರ್ತವ್ಯ ನಿರತ ವೈದ್ಯರಿಗೆ ಬೈದು , ಕಿರುಕುಳ ಕೊಟ್ಟ ಬಗ್ಗೆ ದೂರ ದಾಖಲಾದ ಘಟನೆ ಬುಧವಾರ ನಡೆದಿದೆ.ಬಹಳ ದಿನಗಳಿಂದ  ಮಣಿಪಾಲದಲ್ಲಿ ಚಿಕಿತ್ಸೆಗೆ ಪಡೆದು ಬಂದಿದ್ದ  ವ್ಯಕ್ತಿಯನ್ನು ಮತ್ತೆ ಚಿಕಿತ್ಸೆಗಾಗಿ ಕುಮಟಾಕ್ಕೆ ಕರೆದುಕೊಂಡು  ಹೋಗುತ್ತಿರುವಾಗ ಉಸಿರಾಟದಲ್ಲಿ ತೊಂದರೆ ಕಂಡುಬಂದಿದ್ದು, ಇದರಂದ ಸಂಶಯಗೊಂಡು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಕರೆದುಕೊಂಡು ಬಂದಿದ್ದು,  ವೈದ್ಯರು ನೋಡಿ  ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇದರಿಂದ ಇವರ ಜೊತೆಗೆ ಬಂದ  ಸಂಬಂಧಿಸಿದ ವ್ಯಕ್ತಿ ಬೈದು ಗಲಾಟೆ ಮಾಡಿದ್ದಾಗಿ ತಿಳಿದು ಬಂದಿದೆ.ಸಿಬ್ಬಂದಿ ಮತ್ತು ವೈದ್ಯರ ಕೊರತೆಯ ನಡುವೆಯೂ ಹಾಲಿ ವೈದ್ಯಾಧಿಕಾರಿಗಳು ಮತ್ತು ಇದ್ದ ಸಿಬ್ಬಂದಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಇಂತವರ ಮೇಲೆಯೇ  ದೌರ್ಜನ್ಯ ವೆಸಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಹಿಂದೆ ಸಂಘ ಸಂಸ್ಥೆಯ ಮುಖಂಡ ಎಂದು  ಸಿಬ್ಬಂದಿ ಮತ್ತು ವೈದ್ಯರಿಗೆ ಆವಾಜ್ ಹಾಕಿದ ಘಟನೆ ನಡೆದ್ದನ್ನು ಸ್ಮರಿಸಬಹುದು. ಅಲ್ಲದೆ ಗ್ರಾಮ ಸಭೆಯಲ್ಲಿ ಸಹ ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ರಕ್ಷಣೆ ಅವಶ್ಯಕತೆ ಬಗ್ಗೆ ವಿಷಯ ಪ್ರಸ್ತಾಪವಾಗಿತ್ತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.