ಇಂದು ಟಿಬೆಟಿನ್ ಕಾಲೋನಿಗೆ ದಲೈಲಾಮಾ: ಸಕಲ ಸಿಂಗಾರಗೊಂಡ ಕಾಲೋನಿ


ಮುಂಡಗೋಡ: ಟಿಬೆಟಿಯನ್ ಧರ್ಮಗುರು ದಲೈಲಾಮಾ ಡಿ.12ರಂದು ಟಿಬೆಟಿನ್ ಕಾಲೋನಿಗೆ ಬರುತ್ತಿರುವುದರಿಂದ ಕಾಲೋನಿಯಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಎಲ್ಲಿ ನೋಡಿದರಲ್ಲಿ ಟಿಬೆಟಿಯನ್ನರು, ಟಿಬೆಟಿ ಬೌದ್ದ ಬಿಕ್ಕುಗಳು ಉತ್ಸಾಹದಿಂದ, ಸಂಭ್ರಮದಿಂದ ತಿರುಗುತ್ತಿದ್ದಾರೆ. ಟಿಬೆಟಿಯನ್ ಧರ್ಮಗುರು ದಲೈಲಾಮಾರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡುತ್ತಿದ್ದಾರೆ. ಡಿ.12ರಂದು ಆಗಮಿಸಲಿರುವ ದಲೈಲಾಮಾ ಅವರು 12 ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಎರಡು ವರ್ಷಗಳ ಹಿಂದೆ ದಲೈಲಾಮಾ ಅವರು ತಾಲೂಕಿನ ಟಿಬೆಟಿ ಕಾಲೋನಿಗೆ ಬಂದಿದ್ದರು.

38ನೇ ಬಾರಿಗೆ ಇಲ್ಲಿಗೆ ಆಗಮಿಸುತ್ತಿರುವ ದಲೈಲಾಮಾ ಅವರನ್ನು ಸ್ವಾಗತಿಸಲು ಟಿಬೆಟಿ ಕಾಲೋನಿ ಸಜ್ಜಾಗಿದೆ. ದ್ರೆಪುಂಗ್ ಲೊಸಲಿಂಗ್ ಬೌದ್ಧಮಠ, ದ್ರೆಪುಂಗ್ ಲಾಚಿ ಬೌದ್ಧಮಠ, ಗಾಂದೆನ್ ಜಾಂಗತ್ಸೆ ಬೌದ್ಧಮಠ, ದ್ರೆಪುಂಗ್ ಗೋಮಾಂಗ್ ಬೌದ್ಧ ಮಠದಲ್ಲಿ ಬಣ್ಣಗಳಿಂದ ಸಿಂಗರಿಸಲಾಗುತ್ತಿದೆ. ಬೌದ್ಧ ಮಠದ ಆವರಣದಲ್ಲಿ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗುತ್ತಿದೆ. ಉದ್ಘಾಟನೆಯಾಗಲಿರುವ ಬೌದ್ಧ ವಿದ್ಯಾಲಯ, ದ್ರೆಪುಂಗ್ ಗೋಮಾಂಗ್ ಚರ್ಚಾ ಸಭಾಂಗಣಗಳಲ್ಲಿ ಅಂತಿಮ ಹಂತದ ಕೆಲಸ ಭರದಿಂದ ಸಾಗಿದೆ.

ಪೊಲೀಸ್ ಹಿರಿಯ ಅಧಿಕಾರಿಗಳು ದಲೈಲಾಮಾ ವಾಸ್ತವ್ಯ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದಲೈಲಾಮಾ ಎಲ್ಲಿ ಭೇಟಿ ನೀಡುತ್ತಾರೆ ಅಲ್ಲಲ್ಲಿ ಸಂಪೂರ್ಣ ಸುವ್ಯವಸ್ಥೆಯನ್ನು ಮಾಡಲು ಸಂಬಂಧಪಟ್ಟವರಿಗೆ ಟಿಬೆಟಿ ರಕ್ಷಣಾ ಅಧಿಕಾರಿಗಳು ಸೂಚಿಸಿದ್ದಾರೆ.

ದಲೈಲಾಮಾ ಬರುವಿಕೆಗೆ ಪೊಲೀಸ ಸರ್ಪಗಾವಲು: ಹೆಚ್ಚಿನ ಭದ್ರತೆಗಾಗಿ ಬೆಳಗಾವಿ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗಾ, ಧಾರವಾಡ, ಗದಗ ಹಾಗೂ ಉತ್ತರಕನ್ನಡ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲಾಗಿದ್ದು 2 ಡಿ ಎಸ್ ಪಿ, 7 ಸಿಪಿಐ, 15 ಪಿ ಎಸ್ ಐ, 25 ಎ ಎಸ್ ಐ, 300 ಪೊಲೀಸ್ ಕಾನ್ಸಟೇಬಲ್‍ಗಳನ್ನು ಹಾಗೂ ಡಿಆರ್‍ಕೆಎಸ್‍ಆರ್‍ಪಿ ತುಕುಡಿಗಳನ್ನು ಭದ್ರತೆಗಾಗಿ ಕರೆಯಿಸಿಕೊಳ್ಳಲಾಗಿದೆ ಎಂದು ಸಿಪಿಐ ಶಿವಾನಂದ ಚಲವಾಧಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.