ದತ್ತ ಜಯಂತಿ; ದೀವಗಿ ಮಠದಲ್ಲಿ ಕೋಟಿ ದತ್ತಾತ್ರೇಯ ಜಪ- ಹೋಮ ಸಂಪನ್ನ

ಕುಮಟಾ: ಸನಾತನ ಸಂಸ್ಕೃತಿಯ ಆಚಾರ-ವಿಚಾರ ಉಳಿಸುವ ನಿಟ್ಟಿನಲ್ಲಿ ಸತತ 4 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಾತೃಭೂಮಿ ಸಂಸ್ಥೆಯ ವತಿಯಿಂದ ತಾಲೂಕಿನ ದೀವಗಿಯ ಮಠದಲ್ಲಿ ದತ್ತ ಜಯಂತಿಯ ನಿಮಿತ್ತ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಕೋಟಿ ದತ್ತಾತ್ರೇಯ ಜಪ ಹಾಗೂ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಸಂಪನ್ನಗೊಂಡಿತು.

ಅವಧೂತ ಶ್ರೀ ರಮಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತೃಭೂಮಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಟ್ಟ ಸಮ್ಮುಖದಲ್ಲಿ 200 ಕ್ಕೂ ಅಧಿಕ ಪೌರೋಹಿತ್ಯರು ಕಾರ್ಯಕ್ರಮದ ವಿಧಿವಿಧಾನಗಳನ್ನು ನೆರವೇರಿಸಿದರು. ಮುಂಜಾನೆಯಿಂದಲೇ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದತ್ತಾತ್ರೇಯ, ಶ್ರೀ ರಾಮಚಂದ್ರ, ಆಂಜನೇಯ ಸೇರಿದಂತೆ ಹಲವು ದೇವರ ಮೂರ್ತಿಗಳಿಗೆ ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ನೂರಕ್ಕೂ ಅಧಿಕ ವೈದಿಕ ವೃಂದ ಕೋಟಿ ದತ್ತಾತ್ರೇಯ ಜಪ ಯಜ್ಞದಲ್ಲಿ ಪಾಲ್ಗೊಂಡಿದ್ದರು. ನೂರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀ ದೇವರ ಕೃಪೆಗೆ ಪಾತ್ರರಾದರು. ಮಧ್ಯಾಹ್ನದ ಅನ್ನ ಸಂತರ್ಪಣೆಯಲ್ಲಿ ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.